Advertisement
ಬಹಿರಂಗ ಟೆಂಡರ್ ನಡೆಸದೇ ಅರಣ್ಯ ಇಲಾಖೆಯು ಒಳಗೊಳಗೆ ನಡೆಸಿದ ಟೆಂಡರ್ ನಿಂದಾಗಿ ರಸ್ತೆಯಂಚಿನ ಬೆಲೆ ಬಾಳುವ ಮರಗಳು ಬಲಿಯಾಗಿವೆ. ಈ ಯೋಜನೆಯಡಿ ರಸ್ತೆಯನ್ನು ಅಭಿವೃದ್ಧಿಪಡಿಸಲು ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳ ಕಟಾವಣೆಯ ಬಗ್ಗೆ ಗುರುತಿಸಲಾದ ಮರಗಳನ್ನು ಟೆಂಡರ್ ಕಂ ಹರಾಜು ಮಾಡುವ ಕುರಿತಂತೆ ಕುಂದಾಪುರವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಂದಾಗಿದ್ದರು. ಅದರಂತೆ ಕಟಾವು ಕೆಲಸ ಇದೀಗ ಆರಂಭಗೊಂಡಿದ್ದು ಪ್ರಗತಿಯಲ್ಲಿದೆ.
ಸುಮಾರು 1,000ಕ್ಕೂ ಮಿಕ್ಕಿದ ಬೆಲೆ ಬಾಳುವ ಮರಗಳನ್ನು ಇಲಾಖೆ ಬಹಿರಂಗ ಟೆಂಡರ್ ಮಾಡದೇ ಗುತ್ತಿಗೆದಾರರನ್ನು ಆಹ್ವಾನಿಸದೇ ಜಿಲ್ಲಾಧಿಕಾರಿಗಳು ಪತ್ರ ಮುಖೇನ ನೀಡಿದ ಆದೇಶದಂತೆ ಅರಣ್ಯ ಇಲಾಖೆಯು ನೊಟೀಸ್ ಬೋರ್ಡ್‌ನಲ್ಲಿ ಟೆಂಡರ್ ನೊಟೀಸ್ ಪ್ರಕಟಿಸಿದೆ. ಅಷ್ಟೇ ಅಲ್ಲದೇ ತಮಗೆ ಬೇಕಾದ ನೋಂದಾಯಿತ ಗುತ್ತಿಗೆದಾರರನ್ನು ಆಹ್ವಾನಿಸಿ,
ಮರಗಳನ್ನು ಹಂಚಿಕೆ ಮಾಡಿ ವ್ಯಾಪಾರಕ್ಕೆ ಅಣಿಯಾಗಿ ಬಿಟ್ಟಿದೆ ಹಾಗೂ ಮರಗಳ ಮೊತ್ತವನ್ನು ಇಲಾಖೆಯೇ ಅಂದಾಜಿಸಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ ಪ್ರದರ್ಶಿಸಿ ಮಾದರಿಯಾಗಬೇಕಾದ ಇಲಾಖೆಯೇ ಬಹಿರಂಗ ಏಲಂ ಮಾಡದೇ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಪರಿಣಾಮ ಸರಕಾರದ ಬೊಕ್ಕಸ ಬರಿದಾಗಿದೆ. ಗುತ್ತಿಗೆದಾರರ ಜೇಬು
ತುಂಬಿಸುವಲ್ಲಿ ಇಲಾಖೆ ಆಸಕ್ತಿ ವಹಿಸಿದೆ. ಒಂದೆಡೆ ರಸ್ತೆ ಅಭಿವೃದ್ಧಿ ನಡೆಸಬೇಕಾದ ಲೋಕೋಪಯೋಗಿ ಇಲಾಖೆ ತರಾತುರಿಯಲ್ಲಿ ಮರಗಳನ್ನು ತೆರವು ಮಾಡಲು ಒತ್ತಡ ಹೇರುತ್ತಿರುವ ಬೆನ್ನಲ್ಲೇ, ಅರಣ್ಯ ಇಲಾಖೆ ಕೂಡ ಕಾನೂನು ಹಾಗೂ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡಿದಂತೆ ತೋರುತ್ತಿದೆ.
Related Articles
ಸಾಮಾನ್ಯವಾಗಿ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಮರಗಳ ಬಲಿಯಾಗುವುದು ಮಾಮೂಲಾಗಿಬಿಟ್ಟಿದೆ.
ಮರಗಳನ್ನು ಕಡಿಯದೇ, ಮರಗಳನ್ನು ಬೆಳೆಸೋದು ಅರಣ್ಯ ಇಲಾಖೆಯ ನೀತಿಯಾದರೂ ರಸ್ತೆ ವಿಸ್ತರಣೆ ಸಂದರ್ಭ
ವಿಸ್ತರಣೆಯ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮರಗಳಿದ್ದರೂ ಅದನ್ನು ಕಡಿಯಲೇಬೇಕು. ಆದರೆ ಕಡಿದ ಜಾಗದಲ್ಲಿ ಅಥವಾ ಆ ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಮಗಿದ ಬಳಿಕ ಸಸಿಗಳನ್ನು ನೆಡಬೇಕು ಎನ್ನುವುದು
ಇಲಾಖೆಯ ನಿಯಮಾವಳಿ. ಈ ನಿಯಮದಂತೆ ಈಗಾಗಲೇ ಲೋಕೋಪಯೋಗಿ ಇಲಾಖೆ ಸರಕಾರಕ್ಕೆ ಸಸಿಗಳ ಮೊತ್ತ ಪಾವತಿಸಿದೆ. ಅಭಿವೃದ್ಧಿ ಕಾರ್ಯಗಳು ಮುಗಿದ ಬಳಿಕ ಅರಣ್ಯ ಇಲಾಖೆಯ ಮೂಲಕ ಸಸಿ ನೆಡುವ ಕಾರ್ಯಕ್ರಮಗಳು ನಡೆಯಲಿವೆ. ಅದೇನೇ ಇದ್ದರೂ ನೂರಾರು ವರ್ಷಗಳಿಂದ ಬಾಳಿದ ಮರಗಳನ್ನು ಕಡಿಯುವುದು ಸುಲಭ ಆದರೆ ಮತ್ತೆ ಸಸಿಗಳನ್ನು ನೆಟ್ಟು ಪೋಷಿಸಲು ಅರಣ್ಯ ಇಲಾಖೆಗೂ ಭಾರೀ ಇಚ್ಛಾಶಕ್ತಿ ಬೇಕು. ಅಭಿವೃದ್ಧಿ ಎಂದರೆ ಮರಗಳನ್ನು
ಕಡಿಯುವುದಲ್ಲ. ರಸ್ತೆ ಅಭಿವೃದ್ದಿಯ ಜತೆಜತೆಗೆ ಹಸಿರನ್ನು ಉಳಿಸಿ ಬೆಳೆಸುವುದು ಕೂಡ ಅಭಿವೃದ್ದಿ ಎನ್ನುವ ಸತ್ಯ ಮರೆಯಬಾರದು.
Advertisement
ಸಾವಿರಾರು ಮರಗಳ ಬಲಿ!1. ಪಡುಬಿದ್ರಿ ಚಿಕ್ಕಲ್‌ಗುಡ್ಡೆ ರಸ್ತೆ ಅಭಿವೃದ್ಧಿ ಕಾರ್ಕಳ ಕೇಂದ್ರಸ್ಥಾನದಿಂದ 28 ಕಿ.ಮೀ. ನಿಂದ 33 ಕಿ.ಮೀ.ವರೆಗೆ 123 ಮರಗಳು. 2. ಕಾರ್ಕಳ ಬಂಗ್ಲೆಗುಡ್ಡೆ ಎಣ್ಣೆಹೊಳೆ ತನಕ 33 ಕಿ.ಮೀ.ನಿಂದ 43.5 ಕಿ.ಮೀವರೆಗೆ 304 ಮರಗಳು. 3. ಅಜೆಕಾರು, ಎಣ್ಣೆಹೊಳೆ, ಗುಡ್ಡೆಯಂಗಡಿ ವ್ಯಾಪ್ತಿಯ 242 ಮರಗಳು. 4. ಬಜಗೋಳಿ ಬಿಲ್ಲವ ಸಭಾಭವನ ಜಂಕ್ಷನ್‌ನಿಂದ ಮಯೂರ ಹೊಟೇಲ್ ಜಂಕ್ಷನ್‌ವರೆಗೆ ಕಿ.ಮೀ.107- 107.70 ಕಿ.ಮೀ.ವರೆಗೆ 21 ಮರಗಳು. 5.ಜೋಡುರಸ್ತೆಯಿಂದ ಕುಕ್ಕುಂದೂರು ಮಹಾತ್ಮಾಗಾಂಧೀ ವಸತಿ ಪ್ರೌಢಶಾಲೆಯ ವರೆಗೆ ಕಿ.ಮೀ. 38.20-39.70ಕಿ.ಮೀ ವರೆಗೆ 102 ಮರಗಳು. 6. ಮೂಡಬಿದಿರೆ ವಲಯದ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿ-37 ಈದು ಹೊಸ್ಮಾರು ಬಜಗೋಳಿ ಪೇಟೆಯವರೆಗೆ 94.65ರಿಂದ 97.30 ಕಿ.ಮೀ. ಹಾಗೂ 100.80- 107.70ರ ವರೆಗೆ 208 ಮರಗಳು. ಅಭಿವೃದ್ಧಿಯ ಹಸರಲ್ಲಿ ಬಲಿಯಾಗಲಿವೆ. – ಪ್ರಸಾದ್ ಶೆಣೈ