ಮಂಗಳೂರು: ಕೇಂದ್ರ ಸರಕಾರದ ಅಧೀನ ಸಂಸ್ಥೆ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ದೇಶದ ಸಂವಿಧಾನಬದ್ಧ 22 ಭಾಷೆಗಳೊಂದಿಗೆ ಇತರ ವಿವಿಧ ಭಾಷೆಗಳ ಸಾಹಿತ್ಯ, ಸಂಶೋಧನೆ, ಶಬ್ದಕೋಶಗಳ ಕೃತಿಗಳನ್ನು ಶೇಖರಿಸಿ ಅಂಡ್ರಾಯ್ಡ ಆ್ಯಪ್, ವಿಂಡೋಸ್ ಆ್ಯಪ್‌ಗ್ಳ ಮೂಲಕ ಮಾಹಿತಿ ಒದಗಿಸುವ “ಭಾರತವಾಣಿ’ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದೆ.
ರಾಷ್ಟ್ರೀಯ ಭಾಷೆಗಳಲ್ಲಿ ಒಂದಾದ ಕೊಂಕಣಿ ಬಗ್ಗೆಯೂ “ಭಾರತವಾಣಿ’ ಯೋಜನೆಯಡಿ ವೆಬ್‌ಸೈಟ್ ತಯಾರಿಸಲಾಗಿದ್ದು, ಕೊಂಕಣಿ ಭಾಷಾ ಅಭಿವೃದ್ಧಿಗಾಗಿ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಾಶಿಸಲ್ಪಟ್ಟ ಗ್ರಂಥಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು “ಭಾರತವಾಣಿ’ ಯೋಜನೆ ಸಂಪನ್ಮೂಲ ವ್ಯಕ್ತಿ ಬೇಲೂರು ಸುದರ್ಶನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಿದ ಸಭೆಯಲ್ಲಿ ತಿಳಿಸಿದರು.
ಭಾರತೀಯ ಭಾಷಾ ಸಂಸ್ಥಾನ ಮತ್ತು ವಿಶ್ವ ಕೊಂಕಣಿ ಕೇಂದ್ರದ ಒಡಂಬಡಿಕೆ ವಿಧಿಪತ್ರವನ್ನು ಈ ವೇಳೆ ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.
ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿದರು. ಉಪಾಧ್ಯಕ್ಷರಾದ ಅಲೆನ್ ಸಿ.ಎ. ಪಿರೇರ, ವೆಂಕಟೇಶ ಎನ್. ಬಾಳಿಗಾ, ಶಾಲೆಗಳಲ್ಲಿ ಕೊಂಕಣಿ ಶಿಕ್ಷಣದ ಸಂಚಾಲಕ ಡಾ| ಕೆ. ಮೋಹನ ಪೈ, ಕೊಂಕಣಿ ಭಾಷಾ ಮಂಡಳ ಅಧ್ಯಕ್ಷೆ ಗೀತಾ ಸಿ. ಕಿಣಿ, ಮಂಜೇಶ್ವರ ಜಯಂತ ಕಿಣಿ, ಮಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ಹಿರಿಯ ಉದ್ಘೋಷಕಿ ಶಕುಂತಳಾ ಆರ್. ಕಿಣಿ, ವಿಶ್ವ ಕೊಂಕಣಿ ಕೇಂದ್ರದ ಸದಸ್ಯ ಉಳ್ಳಾಲ ರಾಘವೇಂದ್ರ
ಕಿಣಿ, ಸ್ಮಿತಾ ಜೆ. ಶೆಣೈ, ಕೊಂಕಣಿ ಕಿರುಚಿತ್ರ ನಿರ್ಮಾಪಕ ಕರೋಪಾಡಿ ಅಕ್ಷಯ ನಾಯಕ್, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು, ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ಸಹಾಯಕ ನಿರ್ದೇಶಕ ಗುರುದತ್ತ ಬಂಟ್ವಾಳಕಾರ, ವಿಶ್ವ ಕೊಂಕಣಿ ಪುಸ್ತಕ ಗ್ರಂಥಾಲಯದ ಸುಬ್ರಾಯ ನಾಯಕ ಮೊದಲಾದವರು ಉಪಸ್ಥಿತರಿದ್ದರು.