Advertisement

ಕುಷ್ಠರೋಗ ನಿಯಂತ್ರಣ 26 ಮಂದಿಗೆ ಚಿಕಿತ್ಸೆ

01:28 AM Aug 07, 2019 | sudhir |

ಕಾಸರಗೋಡು: ಜಿಲ್ಲೆಯಲ್ಲಿ 6 ಮಕ್ಕಳ ಸಹಿತ 26 ಕುಷ್ಠರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗು ತ್ತಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ| ಕೆ.ಕೆ. ಷಾಂಟಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮ ಸಂಬಂಧ ಆಲೋಚನ ಸಭೆಯಲ್ಲಿ ಅವರು ಮಾತನಾಡಿದರು.

ಆ. 14ರಿಂದ 27ರ ವರೆಗೆ ಕುಷ್ಠರೋಗ ಪತ್ತೆ ಕಾರ್ಯಕ್ರಮ ಮತ್ತೆ ಜರಗಲಿದೆ. ಸಮಾಜದಲ್ಲಿ ಅಳಿದುಳಿದಿರುವ ಕುಷ್ಠರೋಗಿ ಗಳನ್ನು ಪತ್ತೆ ಮಾಡಿ ಅವರಿಗೆ ಸೂಕ್ತರೀತಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ನಡೆಸಲಾಗುವ ತೀವ್ರಯತ್ನ ಕಾರ್ಯಕ್ರಮ ವಾಗಿರುವ ‘ಅಶ್ವಮೇಧಂ’ನ ದ್ವಿತೀಯ ಹಂತವಾಗಿ ಈ ಚಟುವಟಿಕೆ ನಡೆಯಲಿದೆ. ತರಬೇತಿ ಲಭಿಸಿರುವ ಸ್ವಯಂ ಸೇವಕರು ಮನೆ ಮನೆ ಸಂದರ್ಶನ ನಡೆಸಿ ಕುಷ್ಠರೋಗ ಸಂಬಂಧ ಚರ್ಮರೋಗದ ತಪಾಸಣೆ ನಡೆಸುವರು. ಒಬ್ಟಾಕೆ ಆಶಾ ಕಾರ್ಯಕರ್ತೆ, ಒಬ್ಬ ಪುರುಷ ಸ್ವಯಂಸೇವಕ ಇರುವ ತಂಡ ಈ ಚಟುವಟಿಕೆ ನಡೆಸಲಿದೆ. ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ 1634 ತಂಡಗಳು ಸಿದ್ಧವಾಗಿವೆ. ರೋಗಬಾಧೆಯ ಸಂಶಯವಿರುವವರನ್ನು ಸಮಗ್ರ ತಪಾಸಣೆಗೊಳಪಡಿಸುವ ನಿಟ್ಟಿನಲ್ಲಿ ಹೆಲ್ತ್ ಇನ್‌ಸ್ಪೆೆಕ್ಟರ್‌ ಮತ್ತು ಪಬ್ಲಿಕ್‌ ಹೆಲ್ತ್ ನರ್ಸ್‌ ಗಳಿಗೆ ಹೊಣೆ ನೀಡಲಾಗಿದೆ.

ರೋಗಿಗಳಿಗೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಲಭ್ಯ ಏರ್ಪಡಿಸಲಾಗಿದೆ. ಆರಂಭ ಘಟ್ಟದಲ್ಲೇ ರೋಗ ಪತ್ತೆಮಾಡಿ ಸೂಕ್ತ ಚಿಕಿತ್ಸೆ ಪಡೆದರೆ ಅಂಗವೈಕಲ್ಯ ಬರದಂತೆ ತಡೆಯುವಿಕೆ ಸಹಿತ ಪೂರ್ಣ ರೂಪದಲ್ಲಿ ರೋಗಮುಕ್ತಿ ಸಾಧ್ಯ. ಜತೆಗೆ ಯಾವ ಹಂತದಲ್ಲಿ ರೋಗ ಪತ್ತೆಯಾದರೂ ಚಿಕಿತ್ಸೆಯಿಂದ ಗುಣಮುಖರಾಗುವ ಸಾಧ್ಯ ತೆಯೂ ಈಗ ಇದೆ ಎಂದರು.

ಆರ್‌.ಸಿ.ಎಚ್. ಅಧಿಕಾರಿ ಡಾ| ಮುರಳೀಧರ ನಲ್ಲೂರಾಯ, ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಪಿ.ಟಿ. ಅನಂತಕೃಷ್ಣನ್‌, ಜಿಲ್ಲಾ ಪರಿಶಿಷ್ಟ ಜಾತಿ ಕಲ್ಯಾಣ ಅಧಿಕಾರಿ ಮೀನಾರಾಣಿ, ಐ.ಸಿ.ಡಿ.ಎಸ್‌. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್‌, ಸಹಾಯಕ ಮಾಸ್‌ ಮೀಡಿಯಾ ಅಧಿಕಾರಿ ಅರುಣ್‌ ಲಾಲ್ ಎಸ್‌.ವಿ., ಶಿಕ್ಷಣ ಸಹಾಯಕ ನಿರ್ದೇಶಕ ಕಚೇರಿಯ ಕೃಷ್ಣರಾಜ್‌, ಪಂಚಾಯತ್‌ ಸಹಾಯಕ ನಿರ್ದೇಶಕ ಕಚೇರಿಯ ಕೆ. ಮೋಹನನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next