Advertisement

ಇಂದಿನಿಂದ ರಿಯಾಯಿತಿ ದರದಲ್ಲಿ ಚಿಕಿತ್ಸೆ

11:47 AM Aug 02, 2021 | Team Udayavani |

ಹೊಳಲ್ಕೆರೆ: ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜು. 31ರಿಂದ ಆ. 2ರವರೆಗೆ ಮೂರು ದಿನ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಮಣಿಪಾಲ್‌ ಆರೋಗ್ಯ ಕಾರ್ಡ್‌ಗಳ ನವೀಕರಣ ಹಾಗೂ ಹೊಸ ಕಾರ್ಡ್‌ಗಳನ್ನು ನೋಂದಣಿ ಮಾಡಿಕೊಡಲಾಗುವುದು ಎಂದು ಮಣಿಪಾಲ್‌ ಆರೋಗ್ಯ ಕಾರ್ಡ್‌ ಮುಖ್ಯ ಸಂಯೋಜಕ ಕೆ. ಬಿ. ಕೆಂಚನಗೌಡ ಹೇಳಿದರು.

Advertisement

ಮಣಿಪಾಲ್‌ ಕಸ್ತೂರ ಬಾ ಆಸ್ಪತ್ರೆ ಸಿಬ್ಬಂದಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಾಮಾಜಿಕ ಕಾಳಜಿಯೊಂದಿಗೆ ಉತ್ಕÅಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವುದು ಆರೋಗ್ಯ ಕಾರ್ಡ್‌ ವಿತರಣೆಯ ಉದ್ದೇಶವಾಗಿದೆ.

ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಇದರ ಧ್ಯೇಯ ವಾಕ್ಯವಾಗಿದೆ. ಮಣಿಪಾಲ್‌ ಆರೋಗ್ಯ ಕಾರ್ಡ್‌ನ್ನು ಒಂದು ಅಥವಾ ಎರಡು ವರ್ಷದ ಅವ ಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಹಿರಿಯ ವ್ಯವಸ್ಥಾಪಕ ಕೆ. ಸಚಿನ್‌ ಕಾರಂತ್‌, ಸಹಾಯಕ ವ್ಯವಸ್ಥಾಪಕ ಬಿ.ಎಸ್‌.ಕೃಷ್ಣಪ್ರಸಾದ, ಅನಿಲ್‌ ನಾಯ್ಕ ಇದ್ದರು.

 

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next