Advertisement

ಗಾಯಗೊಂಡ ಹೋರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಗೋಪ್ರೇಮಿಗಳು

12:34 AM Aug 06, 2019 | sudhir |

ಬದಿಯಡ್ಕ: ಗಾಯಗೊಂಡು ರಸ್ತೆಬದಿಯಲ್ಲಿ ತಿರುಗಾಡಿಕೊಂಡಿದ್ದ ಕಾಸರಗೋಡು ಗಿಡ್ಡ ತಳಿಯ ಹೋರಿಗೆ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಗೋಪ್ರೇಮಿಗಳು ಮಾನವೀಯತೆಯನ್ನು ಮೆರೆದಿದ್ದಾರೆ.

Advertisement

ಮುಳ್ಳೇರಿಯ ರಸ್ತೆಯ ಮಾವಿನಕಟ್ಟೆಯಲ್ಲಿ ರವಿವಾರ ಕಾಸರಗೋಡು ಗಿಡ್ಡ ತಳಿಯ ಹೋರಿಯೊಂದು ಭುಜದ ಭಾಗದಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿತ್ತು. ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲ ಚಂದ್ರಗಿರಿ ವಲಯ ಅಧ್ಯಕ್ಷ ಅಮ್ಮಂಕಲ್ಲು ಬಾಲಕೃಷ್ಣ ಮಾಸ್ತರ್‌ ಅವರ ಪುತ್ರ ಪ್ರಮೋದ್‌ ಅಮ್ಮಂಕಲ್ಲು ಅವರು ಔದ್ಯೋಗಿಕ ಕಾರ್ಯಾರ್ಥ ಆ ದಾರಿಯಾಗಿ ತೆರಳುತ್ತಿದ್ದಾಗ ಹೋರಿಯ ಅವಸ್ಥೆ ಕಂಡು ಮನಕರಗಿ ಮಠದ ಕಾಮದುಘಾ ಗೋರಕ್ಷಾ ವಿಭಾಗ ಸಂಚಾಲಕ ಡಾ| ವೈ.ವಿ. ಕೃಷ್ಣಮೂರ್ತಿಯವರ ಅವಗಾಹನೆಗೆ ತರಲಾಯಿತು. ಕೂಡಲೇ ಅವರ ನಿರ್ದೇಶನ ಪ್ರಕಾರ ಬದಿಯಡ್ಕದಲ್ಲಿರುವ ಸರಕಾರಿ ಪಶು ವೈದ್ಯಕೀಯ ಆಸ್ಪತ್ರೆಗೆ ವಿವರ ತಿಳಿಸಲಾಯಿತು. ಚಂದ್ರಗಿರಿ ವಲಯ ಸೇವಾ ವಿಭಾಗದ ಪ್ರಧಾನ ಸುಬ್ರಹ್ಮಣ್ಯ ಮೀನಗದ್ದೆ ಅವರೂ ತತ್‌ಕ್ಷಣ ಬಂದು ಸೇರಿದರು. ಕೂಡಲೇ ಕಾರ್ಯಪ್ರವೃತ್ತರಾದ ಅವರು ಕಾಸರ ಗೋಡಿನ ನುರಿತ ಪಶು ವೈದ್ಯರನ್ನು ಕರೆಸಿದರು. ಸ್ಥಳೀಯ ಗೋ ಭಕ್ತರೂ ಜತೆಗೂಡಿದರು. ಹೋರಿಗೆ ಅರಿವಳಿಕೆ ಚುಚ್ಚು ಮದ್ದು, ಸೂಕ್ತವಾದ ಚಿಕಿತ್ಸೆಯನ್ನು ನೀಡಲಾಯಿತು. ಬಳಿಕ ಅದರ ಮಾಲಕರಲ್ಲಿಗೆ ಹೋರಿಯನ್ನು ತಲಪಿಸಲಾಯಿತು.

ಘಟನೆಗೆ ತತ್‌ಕ್ಷಣ ಸ್ಪಂದಿಸಿ ಸೂಕ್ತ ಪರಿಹಾರ ಕಾರ್ಯಕ್ಕೆ ಮುಂದಾದ ಸುರೇಶ ಮೀನಗದ್ದೆ, ಪ್ರಮೋದ್‌ ಹಾಗೂ ಸ್ಥಳೀಯ ಗೋಭಕ್ತರ ಈ ಕಾರ್ಯ ಬಹಳ ಶ್ಲಾಘನೀಯ ಮತ್ತು ಮಾದರಿ. ಇವರಿಗೆ ಕೃತಜ್ಞತೆಗಳು ಎಂಬುದಾಗಿ ಹೋರಿಯ ಮಾಲಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next