Advertisement

ದ್ರಾಕ್ಷಿ ಸೌಂದರ್ಯದ ಖಜಾನೆ

03:45 AM Feb 03, 2017 | |

ಹಸಿದ್ರಾಕ್ಷಿ ಅಥವಾ ಒಣದ್ರಾಕ್ಷಿಯೇ ಇರಲಿ ರುಚಿಯೂ ಚೆನ್ನ , ಆರೋಗ್ಯಕ್ಕೂ ಉತ್ತಮ. ಜೊತೆಗೆ ಹಲವು ಸೌಂದರ್ಯವರ್ಧಕ ಗುಣಗಳನ್ನು ಹೊಂದಿರುವುದರಿಂದ ನಿತ್ಯೋಪಯೋಗಿ “ಕಾಸೆ¾ಟಿಕ್‌’ ಗಳ ರೀತಿಯಲ್ಲಿ ನೈಸರ್ಗಿಕವಾಗಿ ಮನೆಯಲ್ಲಿಯೇ ದ್ರಾಕ್ಷಿಗಳನ್ನು ಉಪಯೋಗಿಸಿ ಸೌಂದರ್ಯ ವರ್ಧಿಸಬಹುದು. ಸೌಂದರ್ಯ ರಕ್ಷಿಸಿಕೊಳ್ಳಬಹುದು.

Advertisement

. ತಾಜಾ ದ್ರಾಕ್ಷಿ ಹಣ್ಣುಗಳು ಹಲವು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು , ಫೈಟೋ ನ್ಯೂಟ್ರಿಯೆಂಟ್‌ಗಳಿಂದಲೂ ಸಮೃದ್ಧವಾಗಿದೆ.

6-8 ಹಸಿದ್ರಾಕ್ಷಿಗಳನ್ನು ಚೆನ್ನಾಗಿ ತೊಳೆದು ಅರೆದು ಸ್ವಲ್ಪ ಗುಲಾಬಿ ಜಲದೊಂದಿಗೆ ಮುಖಕ್ಕೆ ಲೇಪಿಸಬೇಕು. 20 ನಿಮಿಷದ ಬಳಿಕ ತೊಳೆಯಬೇಕು. ಇದರಿಂದ ಒಣಚರ್ಮ, ಒರಟು ಚರ್ಮ ನಿವಾರಣೆಯಾಗುತ್ತದೆ. ಚರ್ಮದ ಮೃದುತ್ವ ಹಾಗೂ ತಾಜಾತನ ವೃದ್ಧಿಯಾಗುತ್ತದೆ.

. ಒಣದ್ರಾಕ್ಷಿಗಳಲ್ಲಿ ಚರ್ಮದ ಉರಿಯೂತ ನಿವಾರಕ ಗುಣವಿರುವುದರಿಂದ ಇದನ್ನು ಮೊಡವೆಗಳಿಗೆ ಲೇಪಿಸಿದರೆ ಗುಣಕಾರಿ.

ವಿಧಾನ: 10-15 ಒಣದ್ರಾಕ್ಷಿಗಳನ್ನು ಚೆನ್ನಾಗಿ ತೊಳೆದು 1/4 ಕಪ್‌ ನೀರಿನಲ್ಲಿ ನೆನೆಸಬೇಕು. ನಂತರ ಅರ್ಧ ಗಂಟೆಯ ಬಳಿಕ ಚೆನ್ನಾಗಿ ಅರೆದು ಪೇಸ್ಟ್‌ ತಯಾರಿಸಬೇಕು. ಇದಕ್ಕೆ ಸ್ವಲ್ಪ ಜೇನು ಬೆರೆಸಿ ಇಡೀ ಮುಖಕ್ಕೆ ತೆಳ್ಳಗೆ ಲೇಪಿಸಬೇಕು. ಮೊಡವೆ ಇರುವ ಭಾಗದಲ್ಲಿ ದಪ್ಪ ಪದರದಂತೆ ಲೇಪಿಸಿ 1/2 ಗಂಟೆಯ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಇದರಿಂದ ಇಡೀ ಮೊಗದ ಕಾಂತಿ ವರ್ಧಿಸುವುದು ಮಾತ್ರವಲ್ಲ, ಮೊಡವೆಯು ಮಾಯುತ್ತದೆ ಹಾಗೂ ಕಲೆ ನಿವಾರಕವೂ ಹೌದು.

Advertisement

ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಲೇಪಿಸಬಹುದು. ಶ್ವೇತವರ್ಣ ವೃದ್ಧಿಗೆ ಕಪ್ಪು ದ್ರಾಕ್ಷಿÒಯ ಮಾಸ್ಕ್ ಚರ್ಮ ಬಿಳಿಯಾಗಲು ಈ ಮಾಸ್ಕ್ ಬಹಳ ಪರಿಣಾಮಕಾರಿ. 1/4 ಕಪ್‌ ಕಪ್ಪು ದ್ರಾಕ್ಷಿಯನ್ನು ಅರೆದು ಅದಕ್ಕೆ 2 ಚಮಚ ನೀರಿನಲ್ಲಿ ಕರಗಿಸಿದ ಕೇಸರಿಯ ದಳ (10-12)ಗಳನ್ನು ಬೆರೆಸಬೇಕು. ಒಂದು ಚಮಚ ಜೇನು, 2 ಚಮಚ ಆಲೂಗಡ್ಡೆಯ ರಸ, 1/2 ಚಮಚ ಅರಸಿನ, 1 ಚಮಚ ಚಂದನ ಬೆರೆಸಿ ಪೇಸ್ಟ್‌ ತಯಾರಿಸಬೇಕು.

ಇದನ್ನು ಮುಖಕ್ಕೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಿ 20 ನಿಮಿಷಗಳ ಬಳಿಕ ತೊಳೆಯಬೇಕು. ಇದರಿಂದ ಮುಖ ಶುಭ್ರ ಹಾಗೂ ಮೃದು ಮತ್ತು ಬಿಳಿಯಾಗುತ್ತದೆ. ಕಲೆ ನಿವಾರಕವೂ ಹೌದು.

ದ್ರಾಕ್ಷಿಯಲ್ಲಿ ಅಧಿಕ ಫ್ಲೇವನಾಯ್ಡ ಗಳು ಇರುವುದರಿಂದ ಈ ರೀತಿಯಲ್ಲಿ ಮುಖಕ್ಕೆ ಫೇಸ್‌ಮಾಸ್ಕ್ ಲೇಪಿಸುವುದರಿಂದ ಮುಖ ಬಿಳಿಯಾಗುತ್ತದೆ ಹಾಗೂ ಕಲೆಯು ನಿವಾರಣೆಯಾಗಿ ಕಾಂತಿ ವರ್ಧಿಸುತ್ತದೆ.

1/2 ಕಪ್‌ ಹಸಿದ್ರಾಕ್ಷೆ ಮತ್ತು 10 ನೆನೆಸಿದ ಒಣದ್ರಾಕ್ಷಿÒಗಳನ್ನು ಮಿಕ್ಸರ್‌ನಲ್ಲಿ ತಿರುವಿ ಜ್ಯೂಸ್‌ ತಯಾರಿಸಿ ಅದಕ್ಕೆ 1 ಚಮಚ ಜೇನು ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದೂ ಮುಖದ ಬಿಳಿ ವರ್ಣ ಕಾಂತಿ ವರ್ಧಿಸುತ್ತದೆ. ಚರ್ಮ ಸ್ನಿಗ್ಧವಾಗುತ್ತದೆ. ಮೊಡವೆ ನಿವಾರಕವೂ ಹೌದು.

ಜಿಡ್ಡುನಿವಾರಕ ದ್ರಾಕ್ಷಿ-ಮುಲ್ತಾನಿ ಮಿಟ್ಟಿ ಫೇಸ್‌ಪ್ಯಾಕ್‌
ಕಪ್ಪು ತಾಜಾ ದ್ರಾಕ್ಷೆಗಳನ್ನು ಅರೆದು 5 ಚಮಚದಷ್ಟು ತೆಗೆದುಕೊಂಡು ಅದಕ್ಕೆ 2 ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ತುದಿ ಬೆರಳುಗಳಿಂದ ಮಾಲೀಶು ಮಾಡಿ ಲೇಪಿಸಿ ಫೇಸ್‌ಪ್ಯಾಕ್‌ ಮಾಡಬೇಕು. ಅರ್ಧ ಗಂಟೆಯ ಬಳಿಕ ಬಿಸಿನೀರಿನಿಂದ ಮುಖ ತೊಳೆದರೆ ಅಧಿಕ ಜಿಡ್ಡು, ಕೊಳೆ ನಿವಾರಣೆಯಾಗಿ ಮುಖ ಶುಭ್ರ ಹಾಗೂ ಹೊಳಪಿನಿಂದ ಕೂಡಿರುತ್ತದೆ.

ಗ್ರೇಪ್‌ ಸðಬ್‌
ತಾಜಾ ಕಪ್ಪು ದ್ರಾಕ್ಷಿಗಳನ್ನು ಅರ್ಧಕ್ಕೆ ಕತ್ತರಿಸಿ, ಬೀಜ ತೆಗೆಯಬೇಕು. ಅದರ ಮೇಲೆ ಸಕ್ಕರೆಯನ್ನು ಚಿಮುಕಿಸಿ ಅದನ್ನು ಬ್ಲ್ಯಾಕ್‌ ಹೆಡ್ಸ್‌ , ವೈಟ್‌ ಹೆಡ್ಸ್‌ ಇರುವ ಭಾಗದಲ್ಲಿ ಮೃದುವಾಗಿ ಮಾಲೀಶು ಮಾಡಬೇಕು. ತದನಂತರ ಅದೇ ಭಾಗದಲ್ಲಿ 10 ನಿಮಿಷ ಇಟ್ಟು , ಈ ಅರ್ಧ ಕತ್ತರಿಸಿದ ದ್ರಾಕ್ಷಿಗಳನ್ನು ಮುಖದಿಂದ ತೆಗೆದು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ಈ ರೀತಿ ನಿತ್ಯ ಮುಖಕ್ಕೆ ದ್ರಾಕ್ಷಿಯ ಸðಬ್‌ ಬಳಸಿದರೆ 2-3 ವಾರಗಳಲ್ಲಿ ಬ್ಲ್ಯಾಕ್‌ ಹೆಡ್ಸ್‌ ಹಾಗೂ ವೈಟ್‌ ಹೆಡ್ಸ್‌ ನಿವಾರಣೆಯಾಗುತ್ತದೆ.

ನಿತ್ಯ ಒಣದ್ರಾಕ್ಷಿ 10-12 ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಚರ್ಮದ ತೊಂದರೆ, ರೋಗಗಳಲ್ಲಿ ಶಮನಕಾರಿ ಹಾಗೂ ಕಾಂತಿವರ್ಧಕವಾಗಿದೆ.

– ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next