Advertisement

ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹಣ-ದೇವರ ಒಡವೆ ಕಳವು

01:04 PM Apr 14, 2022 | Team Udayavani |

ಹಿರಿಯೂರು: ‘ದಕ್ಷಿಣ ಕಾಶಿ’ ಖ್ಯಾತಿಯ ಶ್ರೀ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದ ಮುಂಬಾಗಿಲಿನ ಬೀಗ ಒಡೆದ ದುಷ್ಕರ್ಮಿಗಳು ಕಾಣಿಕೆ ಹಣ ಹಾಗೂ ದೇವರ ಒಡವೆಗಳನ್ನು ಕಳವು ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Advertisement

ದೇವರಿಗೆ ಹಾಕುವಂತಹ ಬೆಳ್ಳಿಯ ಮುಖ ಪದ್ಮ, ಈಶ್ವರಲಿಂಗದ ಮೇಲೆ ಇಡುವ ನಾಗಾಭರಣ, ದೇವರ ಅಲಂಕಾರಕ್ಕೆ ಉಪಯೋಗಿಸುವಂತಹ ಪ್ರಭಾವಳಿ ಸೇರಿದಂತೆ ಅಂದಾಜು 10 ಕೆಜಿ ಬೆಳ್ಳಿಯ ದೇವರ ಒಡೆವೆಗಳು, ಎರಡು ದೊಡ್ಡ ಹುಂಡಿಗಳನ್ನು ಒಡೆದು ಅಂದಾಜು 5 ಲಕ್ಷ ರೂ.ಗಿಂತ ಹೆಚ್ಚಿನ ಕಾಣಿಕೆ ಹಣವನ್ನು ಕಳ್ಳರು ದೋಚಿದ್ದಾರೆ. ಹುಂಡಿಯಲ್ಲಿದ್ದ ಚಿಲ್ಲರೆ ಹಣ, ನೂರು ಮತ್ತು ಐವತ್ತು ರೂ. ನೋಟುಗಳು ಸೇರಿದಂತೆ 18,500 ರೂ.ಗಳನ್ನು ಕಾಣಿಕೆ ಹುಂಡಿಗಳ ಬಳಿಯೇ ಬಿಟ್ಟು ಹೋಗಿದ್ದಾರೆ.

ಬುಧವಾರ ಬೆಳಿಗ್ಗೆ ದೇವಾಲಯಕ್ಕೆ ಬಂದ ಅರ್ಚಕ ವಿಶ್ವನಾಥ ಆಚಾರ್‌ ಅವರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ತಕ್ಷಣ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹಿರಿಯೂರು ನಗರ ಠಾಣೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇವಾಲಯದಲ್ಲಿ ಸಿಸಿ ಕ್ಯಾಮೆರಾಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next