ಕನಕಪುರ: ಕೃಷಿ ಭೂಮಿಯಲ್ಲಿ ಆಗಾಗ ನಿಧಿ ಶೋಧಕ್ಕಿಳಿದಿರುವ ದುಷ್ಕರ್ಮಿಗಳ ಕೃತ್ಯಕ್ಕೆ ತೇರು ಬೀದಿ ಗ್ರಾಮದ ಪಾಂಡವರ ಗುಡ್ಡೆಯ ಜನರು ಆತಂಕಕ್ಕೊಳಗಾಗಿದ್ದಾರೆ. ಹಾರೋಹಳ್ಳಿ ತಾಲೂಕಿನ ತೇರುಬೀದಿ ಗ್ರಾಮದ ಪಾಂಡ ವರಗುಡ್ಡೆಯ ರೈತರ ಜಮೀನಿನಲ್ಲಿ ನಿಧಿ ಶೋಧ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತೇರು ಬೀದಿ ಗ್ರಾಮದ ಪಾಂಡವರ ಗುಡ್ಡೆಯ ಹನು ಮಂತ ನಾಯಕ್ ಅವರ ಜಮೀನಿನಲ್ಲಿ ಕೆಲವು ದುಷ್ಕರ್ಮಿಗಳು ಗುಂಡಿ ಬಗೆದು ಅರಿಶಿಣ, ಕುಂಕುಮ ಚೆಲ್ಲಾಡಿ ನಿಧಿ ಶೋಧ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಬಾರಿಗೆ ನಿಧಿ ಶೋಧ ಮಾಡಿರುವುದು ಬೆಳಕಿಗೆ ಬಂದಿದ್ದು, ಪದೇ ಪದೆ ದುಷ್ಕರ್ಮಿಗಳು ರೈತರ ಜಮೀನಿನಲ್ಲಿ ನೀಧಿ ಶೋಧಕ್ಕಿಳಿದಿರುವುದು ಸಹಜವಾಗಿಯೇ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮಸ್ಥರ ಆತಂಕ: ಈ ಹಿಂದೆ ಈ ಜಾಗದಲ್ಲಿ ಪಾಂಡವರು ಬಳಸುತ್ತಿದ್ದ ಬಾಣ ದಂತಹ ಕೆಲವು ಕುರುಹುಗಳು ಪತ್ತೆ ಯಾಗಿದ್ದವು ಎಂಬುದು ಗ್ರಾಮದ ಹಿರಿಯ ನಾಗರಿಕರ ಅಭಿ ಪ್ರಾಯ. ಮಹಾಭಾರತದ ನಡೆದ ಕಾಲ ಘಟ್ಟದಲ್ಲಿ ಇಲ್ಲಿ ಪಾಂಡವರು ಓಡಾಡಿ ರಬಹುದೇ ಎಂಬ ಕುತೂಹಲ ಕೂಡ ಗ್ರಾಮಸ್ಥರಲ್ಲಿ ಮೂಡಿಸಿದೆ. ಇಲ್ಲಿ ಪಾಂಡವರ ಕಾಲದ ನಿಧಿ ಸಿಗಬಹುದು ಎಂದು ದುಷ್ಕರ್ಮಿಗಳು ಆಗಾಗ ಬಂದು ನಿಧಿ ಶೋಧ ಮಾಡುತ್ತಿರಬಹುದು ಎಂಬುದು ಗ್ರಾಮಸ್ಥರ ಆತಂಕ.
4 ರಿಂದ 5 ಅಡಿಗಳಷ್ಟು ಗುಂಡಿ ತೆಗೆದು ನಿಧಿಗಾಗಿ ಶೋಧ: ಇತ್ತೀಚಿಗೆ ನಿಧಿ ಶೋಧ ಮಾಡಿರುವ ದುಷ್ಕರ್ಮಿಗಳು ರೈತರ ಜಮೀನಿನಲ್ಲಿ ಸುಮಾರು 4ರಿಂದ 5 ಅಡಿಗಳಷ್ಟು ಗುಂಡಿ ಹಗೆದು ನಿಧಿಗಾಗಿ ಶೋಧ ನಡೆಸಿದ್ದಾರೆ. ನಿಧಿ ಶೋಧ ನಡೆಸಿರುವ ಸ್ಥಳದಲ್ಲಿ ಒಡೆದು ಹಾಕಿರುವ ಕೆಲವು ಹಳೆಯ ಕಾಲದ ಮಡಿಕೆ ಚೂರುಗಳು ಸಹ ಪತ್ತೆಯಾಗಿದ್ದು, ದುಷ್ಕರ್ಮಿಗಳಿಗೆ ನಿಧಿ ಸಿಕ್ಕರಬಹುದು. ಮಡಿಕೆ ಯನ್ನು ಹೊಡೆದು ಹಾಕಿ ನಿಧಿ ತೆಗೆದು ಕೊಂಡು ಹೋಗಿರಬಹುದು ಎಂಬ ಶಂಕೆ ಕೂಡ ಗ್ರಾಮಸ್ಥರಲ್ಲಿ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿ ಶೀಲನೆ ನಡೆಸಿದರೆ ಒಂದಷು ಇತಿಹಾಸ ಕುರುಹುಗಳು ಸಿಗಬಹುದು ಎಂಬುದು ಗ್ರಾಮಸ್ಥರ ಒತ್ತಾಯ.
ಹಿಂದೆ ನಿಧಿ ಶೋಧ ಮಾಡಿದ್ದ ತಂಡದಲ್ಲಿದ್ದ 3 ಮಂದಿ ಸಾವು : ಕಳೆದ ಒಂದು ವರ್ಷದ ಹಿಂದೆ 8 ರಿಂದ 10 ಮಂದಿ ದುಷ್ಕರ್ಮಿಗಳು ಇದೇ ಜಾಗದಲ್ಲಿ ನಿಧಿ ಶೋಧ ಮಾಡುತ್ತಿದ್ದಾಗ ಗ್ರಾಮ ಸ್ಥರು ದುಷ್ಕರ್ಮಿಗಳನ್ನು ಹಿಡಿದು ಹಾರೋಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು. ಆ ನಂತರ ಇಲ್ಲಿ ನಿಧಿ ಶೋಧ ದಂತಹ ಚಟು ವಟಿಕೆ ಗಳು ಕಡಿಮೆಯಾಗಿತ್ತು. ಈಗ ಮತ್ತೆ ಪ್ರಾರಂಭ ಮಾಡಿದ್ದಾರೆ. ಈ ಹಿಂದೆ ನಿಧಿ ಶೋಧ ಮಾಡಿದ್ದ ತಂಡದಲ್ಲಿದ್ದ 3 ಮಂದಿ ಈಗಾ ಗಲೇ ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನುಳಿದಿರುವ 5 ಜನರನ್ನು ವಿಚಾರಣೆ ಗೊಳಪಡಿಸಿದರೆ ಈ ಕೃತ್ಯ ಯಾರು ನಡೆಸಿದ್ದಾರೆ ಎಂಬ ಸತ್ಯ ಹೊರಬರಬಹುದು ಎಂಬುದು ಗ್ರಾಮಸ್ಥರಿಂದ ಒತ್ತಾಯ ಕೇಳಿ ಬಂದಿದೆ.