Advertisement

TRC ಚುನಾವಣೆ; ರಾಮಕೃಷ್ಣ ಹೆಗಡೆ ಕಡವೆ ಬಳಗಕ್ಕೆ ಭರ್ಜರಿ ಜಯಭೇರಿ

10:27 PM Jun 24, 2023 | Team Udayavani |

ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ., (ಟಿಆರ್ಸಿ) ಶಿರಸಿ ಇದರ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಂಸ್ಥೆಯ ಹಾಲಿ ಅಧ್ಯಕ್ಷ ಹಿರಿಯ ಸಹಕಾರಿ ರಾಮಕೃಷ್ಣ ಹೆಗಡೆ ಕಡವೆ ಬಳಗಕ್ಕೆ ಮತದಾರರು ಪ್ರಚಂಡ ಬಹುಮತ ನೀಡಿ ಗೆಲುವನ್ನು ದಾಖಲಿಸಿದ್ದಾರೆ.

Advertisement

ಸಾಮಾನ್ಯ ಕ್ಷೇತ್ರದಿಂದ ಗರಿಷ್ಟ ಮತ ಪಡೆದು ಆಯ್ಕೆಯಾದವರ ಪಟ್ಟಿ ಹೀಗಿದೆ.
ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಗಣಪತಿ ಶೇಷಗಿರಿ ರಾಯ್ಸದ್, ರಮಾಕಾಂತ ವೆಂಕಟ್ರಮಣ ಹೆಗಡೆ ಚಿಪಗಿ, ವಿಘ್ನೇಶ್ವರ ರಾಮಚಂದ್ರ ಹೆಗಡೆ ಅಗಸಾಲ ಕಿಬ್ಬಳ್ಳಿ, ವಿಶ್ವನಾಥ ಗೋಪಾಲಕೃಷ್ಣ ಹೆಗಡೆ ಸೋಮ್ನಳ್ಳಿ, ವಿಶ್ವಾಸ ಪುಂಡಲೀಕ ಬಲ್ಸೆ ಚವತ್ತಿ, ಶಿವಾನಂದ ಗಣಪತಿ ಭಟ್ಟ ನಿಡಗೋಡ, ಸುಬ್ರಾಯ ನಾರಾಯಣ ಹೆಗಡೆ ಹಾವಳಿಮನೆ‌ ವಿಜಯದ ನಗೆ ಬೀರಿದ್ದಾರೆ.

ಹಿಂದುಳಿದ ‘ಬ’ ವರ್ಗದಿಂದ ರಾಮಕೃಷ್ಣ ಹೆಗಡೆ ಕಡವೆ ಬಳಗದಿಂದ ಸ್ಪರ್ಧಿಸಿದ್ದ ಸಂತೋಷಕುಮಾರ ಚಾಮರಾಜ ಗೌಡರ ತೋಟದ ಕಸಗೆ ಗೆಲುವನ್ನು ಕಂಡಿದ್ದಾರೆ. ಒಟ್ಟೂ 2087 ಅರ್ಹ ಶೇರು ಮತದಾರರಲ್ಲಿ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ಶಾಸಕ ಭೀಮಣ್ಣ‌ ನಾಯ್ಕ‌ ಸೇರಿದಂತೆ 1,702 ಶೇರುದಾರರು ಮತವನ್ನು ಚಲಾಯಿಸಿದ್ದರು.

ಇನ್ನುಳಿದಂತೆ ಹಿಂದುಳಿದ ‘ಅ’ 1 ಸ್ಥಾನಕ್ಕೆ ಈರಾ ನಾರಾಯಣ ಗೌಡ ಕಳವೆ, ಸಾಮಾನ್ಯ ಮಹಿಳಾ ಅಭ್ಯರ್ಥಿಗಳ 2 ಸ್ಥಾನಕ್ಕೆ ಹಾಲಿ ನಿರ್ದೇಶಕರುಗಳಾಗಿದ್ದ ಇಂದಿರಾ ಹೆಗಡೆ ಮತ್ತು ಕಲ್ಪನಾ ಕೊಪ್ಪಳ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಾಮಾನ್ಯ ಕ್ಷೇತ್ರದಿಂದ 8 ಜನರಿಗೆ ಅವಕಾಶವಿದ್ದು, 11 ಜನ ಉಮೇದುವಾರಿಕೆ ತೋರಿದ್ದರು. ಹಿಂದುಳಿದ ವರ್ಗ ‘ಬ’ 1 ಸ್ಥಾನವಿದ್ದು, 2 ಜನರು ಮಾತ್ರ ಉಮೇದುವಾರಿಕೆ ತೋರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next