Advertisement

ಮಂಗಳೂರಿಗೆ ಐರ್‌ಲ್ಯಾಂಡ್‌ನ‌ ಆಕರ್ಷಕ ಪ್ರವಾಸಿ ಹಡಗು

01:04 AM May 09, 2019 | Team Udayavani |

ಮಂಗಳೂರು: ಮಂಗಳೂರಿಗೆ ಐಷಾರಾಮಿ ಹಡಗುಗಳ ಮೂಲಕ ವಿದೇಶಿ ಪ್ರವಾಸಿಗರ ಆಗಮನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಾರ್ಷೆಲ್‌ ಐರ್‌ಲ್ಯಾಂಡ್‌ನಿಂದ ಸುಮಾರು 650 ಪ್ರವಾಸಿಗರು ಹಾಗೂ 400 ಸಿಬಂದಿಯನ್ನೊಳಗೊಂಡ ಆಕರ್ಷಕ ಪ್ರವಾಸಿ ಹಡಗು ಎನ್‌ಎಂಪಿಟಿಗೆ ಮಂಗಳವಾರ ಆಗಮಿಸಿತ್ತು.

Advertisement

ವಿದೇಶೀ ಪ್ರವಾಸಿಗರು ಒಂದು ದಿನ ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ವಾಪಸಾಗಿದ್ದಾರೆ. ಕಳೆದ ವರ್ಷ ಒಟ್ಟು 22 ಹಡಗುಗಳಲ್ಲಿ 24,258 ಮಂದಿ ಪ್ರವಾಸಿಗರು ಮಂಗಳೂರಿಗೆ ಆಗಮಿಸಿದ್ದರು. ಈ ವರ್ಷದಲ್ಲಿ ಮೇ ಮೊದಲ ವಾರದವರೆಗೆ ಸುಮಾರು 18 ಕ್ಕೂ ಅಧಿಕ ಪ್ರವಾಸಿ ಹಡಗುಗಳು ಮಂಗಳೂರಿಗೆ ಆಗಮಿಸಿವೆ.

2016ರಲ್ಲಿ ಕೇಂದ್ರಸರಕಾರ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ವೀಸಾ ನೀಡುವ ಪ್ರಕ್ರಿಯೆ ಸರಳಗೊಳಿಸಿ ಬಂದರುಗಳಲ್ಲಿ ಇ-ವೀಸಾ ವ್ಯವಸ್ಥೆ ಮಾಡಿದ ನಂತರ ಮಂಗಳೂರಿಗೆ ಪ್ರವಾಸಿ ಹಡಗುಗಳ ಸಂಖ್ಯೆ ಅಧಿಕವಾಗಿದೆ ಎಂದು ಎನ್‌ಎಂಪಿಟಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next