Advertisement

ಆರೋಗ್ಯದ ಅರಿವಿಗೆ ಸಂಚಾರಿ ರಥ

06:06 PM Oct 17, 2021 | Team Udayavani |

ರಾಮನಗರ: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ಆರೋಗ್ಯ ಇಲಾಖೆ ಮೂಲಕ ದೊರೆಯುವ ಸೇವೆಗಳನ್ನು ಸಾರುವ ದೊಡ್ಡ ಎಲ್‌ಇಡಿ ಪರದೆಯುಳ್ಳ ರಥ ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸಂಚಾರ ಮುಗಿಸಿದೆ.

Advertisement

10 ಗ್ರಾಮಗಳಲ್ಲಿ 2 ದಿನ ಸಂಚಾರ: ಇತ್ತೀಚೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಿ ರಂಜನ್‌ ಈ ರಥಕ್ಕೆ ಚಾಲನೆ ನೀಡಿದ್ದರು. ರಾಮನಗರ ತಾಲೂಕಿನ ಶ್ಯಾನುಭೋಗನಹಳ್ಳಿ, ಜಾಲಮಂಗಲ, ಅಕ್ಕೂರು, ವಿರೂಪಸಂದ್ರ, ಚಿಕ್ಕಗಂಗವಾಡಿ, ಚನ್ನಪಟ್ಟಣದ ಬುಕ್ಕಸಂದ್ರ, ಭೈರಶೆಟ್ಟಿಹಳ್ಳಿ, ಎಂ.ಎನ್‌. ಹೊಸಳ್ಳಿ, ನಾಯಿದೊಳೆ, ಕನ್ನಿದೊಡ್ಡಿ ಹೀಗೆ ಒಟ್ಟು 10 ಗ್ರಾಮಗಳಲ್ಲಿ 2 ದಿನ ಸಂಚರಿಸಿ, ಆರೋಗ್ಯ ಇಲಾಖೆಯಲ್ಲಿನ ಸೇವೆಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಿ ಎಂದು ಆರ್‌.ಸಿ.ಎಚ್‌.ಅಧಿಕಾರಿ ಡಾ.ಪದ್ಮ ತಿಳಿಸಿದ್ದಾರೆ.

ಇದನ್ನೂ ಓದಿ;- ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

ಗ್ರಾಮಗಳಲ್ಲಿ ರಥ ಸಂಚರಿಸಿದ ವೇಳೆ ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆಯಾ ಭಾಗದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಸಹ ಭಾಗವಹಿಸಿ ದ್ದರು. ಡಿ.ಎಲ್.ಒ. ಡಾ.ಮಂಜು ನಾಥ್‌, ಡಿ.ಟಿ.ಒ. ಡಾ.ಕುಮಾರ್‌, ಡಾ.ಆದರ್ಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್‌. ಗಂಗಾಧರ್‌, ಜಿಲ್ಲಾ ಎಸ್‌.ಬಿ.ಸಿ.ಸಿ ಸಂಯೋಜಕರಾದ ಸುರೇಶ್‌ ಬಾಬು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಂಭುಲಿಂಗಯ್ಯ ಮುಂತಾದವರು ರಥ ಸಂಚಾರಕ್ಕೆ ಸಹಕರಿಸಿ ದ್ದರು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next