Advertisement

ಒಂದೇ ಬಸ್‌ನಲ್ಲಿ 300ಕ್ಕೂ  ಹೆಚ್ಚು ವಿದ್ಯಾರ್ಥಿಗಳು…!

02:04 PM Nov 13, 2021 | Team Udayavani |

ಕೆ.ಆರ್‌.ಪೇಟೆ: ಪಟ್ಟಣದಿಂದ ವಿಠಲಾ ಪುರ, ಚಿಕ್ಕಗಾಡಿಗನಹಳ್ಳಿ ಮಾರ್ಗವಾಗಿ ಪೂವನಹಳ್ಳಿಗೆ ಹೋಗುವ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಆದ್ದರಿಂದ ಶಾಲಾ ಕಾಲೇಜು ಪ್ರಾರಂಭದ ಅವಧಿ ಹಾಗೂ ಮನೆಗೆ ಹೋಗುವ ಅವಧಿಯಲ್ಲಿ ಒಂದೇ ಒಂದು ಬಸ್‌ ಸಂಚಾರ ಮಾಡುತ್ತದೆ. ಆದ್ದರಿಂದ ಒಂದೇ ಬಸ್‌ನಲ್ಲಿ ನೂರಾರು ವಿದ್ಯಾರ್ಥಿಗಳು ನೂಕುನುಗ್ಗಲಿನಲ್ಲಿ ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಿ: ಚಿಕ್ಕಗಾಡಿಗನಹಳ್ಳಿ ಬಸ್‌ ನಿಲ್ದಾಣದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಬಸ್‌ ಗಾಗಿ ಕಾಯುತ್ತಿದ್ದಾಗ ಬಸ್‌ ಚಾಲಕ ನಿಲುಗಡೆಯನ್ನು ನಿರಾಕರಿಸಿ, ಮುಂದೆ ಸಾಗುತ್ತಿದ್ದಂತೆ ಬಸ್‌ ಅಡ್ಡಗಟ್ಟಿ ಪ್ರತಿಭಟನೆ ಆರಂಭಿಸಿದ ವಿದ್ಯಾರ್ಥಿಗಳು ಮತ್ತು ಚಿಕ್ಕಗಾಡಿಗನಹಳ್ಳಿ ಗ್ರಾಮಸ್ಥರು, ಇನ್ನೊಂದು ಬಸ್‌ ವ್ಯವಸ್ಥೆ ಮಾಡುವವ ರೆಗೂ ಮುಂದೆ ಹೋಗಲು ಬಿಡುವುದಿಲ್ಲ.

ಇದನ್ನೂ ಓದಿ:- ತ್ರಿಪುರಾ ಘಟನೆ ಖಂಡಿಸಿ ಪ್ರತಿಭಟನೆ

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿ ಯಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Advertisement

ಪಾಸ್‌ ಇದ್ದರೂ ಟಿಕೆಟ್‌ ಪಡೆಯುವ ಸ್ಥಿತಿ: ಮುಖಂಡ ಚಂದ್ರಶೇಖರ್‌ ಮಾತನಾಡಿ, ಪ್ರತಿನಿತ್ಯ ನಮ್ಮ ಊರಿನ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಬಸ್‌ ನಿಲ್ದಾಣಕ್ಕೆ ಬಂದು ಬಸ್‌ಗಾಗಿ ಕಾಯುವುದು, ಬಸ್‌ ಹತ್ತಲು ಜಾಗವಿಲ್ಲದೆ ವಾಪಾಸ್‌ ಮನೆಗೆ ಹೋಗುವುದು ಸಾಮಾನ್ಯವಾಗಿದೆ. ಈ ಬಸ್‌ ಹೋದ ನಂತರ ಇನ್ನೊಂದು ಬಸ್‌ ಬರುತ್ತದೆ.

ಅದರಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಬಸ್‌ಪಾಸ್‌ ತೋರಿಸಿದರೂ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ಸಂಸ್ಥೆಗೆ ಹಣ ಕಟ್ಟಿ ಪಾಸ್‌ ಪಡೆದು ಪ್ರಯಾಣದ ಸಮಯದಲ್ಲಿ ಮತ್ತೆ ಟಿಕೆಟ್‌ ಪಡೆದು ಪ್ರಯಾಣಿಸುವ ಪರಿಸ್ಥಿತಿ ಬಂದಿದೆ. ದಯವಿಟ್ಟು ಈ ಮಾರ್ಗದಲ್ಲಿ ಓಡಾಡುವ ಎಲ್ಲಾ ಬಸ್‌ಗಳಲ್ಲೂ ವಿದ್ಯಾ ರ್ಥಿಗಳು ಸಂಚಾರ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಚಿಕ್ಕಗಾಡಿಗನಹಳ್ಳಿ ಗ್ರಾಮಸ್ಥರು ಹಾಗೂ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next