ರಾಯಗಢ: 26 ವರ್ಷದ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್ ಆನ್ವಿ ಕಾಮ್ದಾರ್ ಮಹಾರಾಷ್ಟ್ರದ ರಾಯಗಢದಲ್ಲಿರುವ ಕುಂಭೆ ಜಲಪಾತದ ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ. ಮುಂಬಯಿಯ 27 ವರ್ಷ ವಯಸ್ಸಿನ ಟ್ರಾವೆಲ್ ಇನ್‌ಫ್ಲೂಯೆನ್ಸರ್, ಆನ್ವಿ ಸ್ನೇಹಿತರೊಡನೆ ಪ್ರವಾಸಕ್ಕೆ ತೆರಳಿದ್ದರು.
ಜಲಪಾತದ ಬಳಿ ವೀಡಿಯೋ ಚಿತ್ರೀಕರಿಸುವ ವೇಳೆ ಕಾಲು ಜಾರಿ 300 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ. ಸ್ಥಳೀಯರು ರಕ್ಷಣ ಕಾರ್ಯಾಚರಣೆಗೆ ಮುಂದಾ ದರೂ ವಿಪರೀತ ಮಳೆಯ ಕಾರಣ ಆಕೆಯನ್ನು ಕಮರಿಯಿಂದ ಮೇಲೆತ್ತುವುದು ಕಷ್ಟವಾಗಿತ್ತು. 6 ಗಂಟೆ ಕಾರ್ಯಾಚರಣೆ ಬಳಿಕ ಮೇಲೆತ್ತಿದರೂ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾರೆ.
ಕಣಿವೆಯಲ್ಲಿ ಸುಮಾರು 300 ಅಡಿಗಳಷ್ಟು ಬಂಡೆಗಳ ಗಟ್ಟಿಯಾದ ಜಾಗಕ್ಕೆ ಬಿದ್ದಿದ್ದು ಮೊದಲು ಗುರುತಿಸಲಾಗಲಿಲ್ಲ. ರಾಪ್ಪೆಲಿಂಗ್ ಹಗ್ಗಗಳಿಗೆ ಜೋಡಿಸಲಾದ ಸ್ಟ್ರೆಚರ್ ಬಳಸಿ ಮೇಲಕ್ಕೆ ತರಲಾಗಿದೆ. ಆರು ರಕ್ಷಕರು ಕೆಳಗಿಳಿದು ಕಾರ್ಯಾಚರಣೆ ನಡೆಸಿದರೆ 50 ಮಂದಿ ಬೆಟ್ಟದ ಮೇಲೆ ಸಹಾಯ ಮಾಡಿದರು.