Advertisement

ಪ್ರಯಾಣ ನಿರ್ಬಂಧ : ಸಿಂಗಾಪುರ್‌ ಬ್ಯಾಡ್ಮಿಂಟನ್‌ ರದ್ದು

12:35 AM May 13, 2021 | Team Udayavani |

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗೆ ಕಟ್ಟಕಡೆಯ ಕೂಟವಾಗಿದ್ದ ಸಿಂಗಾಪುರ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ. ಪ್ರಯಾಣ ನಿರ್ಬಂಧ ಹಾಗೂ 21 ದಿನಗಳ ಕ್ವಾರಂಟೈನ್‌ ಹಿನ್ನೆಲೆಯಲ್ಲಿ ಬಿಡಬ್ಲ್ಯುಎಫ್ ಬುಧವಾರ ಈ ನಿರ್ಧಾರಕ್ಕೆ ಬಂತು.

Advertisement

ಸಿಂಗಾಪುರ್‌ ಓಪನ್‌ “ಸೂಪರ್‌ 500′ ಟೂರ್ನಿಯಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗಿದ್ದ ಕೊನೆಯ ಅವಕಾಶವಾಗಿತ್ತು. ಜೂನ್‌ ಒಂದರಿಂದ ಆರರ ತನಕ ಈ ಪಂದ್ಯಾವಳಿ ನಡೆಯಬೇಕಿತ್ತು. ಇದನ್ನು ರದ್ದುಗೊಳಿಸಿದ ಕಾರಣ ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌ ಮೊದಲಾದವರ ಒಲಿಂಪಿಕ್ಸ್‌ ಟಿಕೆಟ್‌ ಅಧಿಕೃತವಾಗಿ ರದ್ದುಗೊಂಡಂತಾಯಿತು.

ಮಲೇಶ್ಯನ್‌ ಓಪನ್‌ ಕೂಟವನ್ನು ಮುಂದೂಡಿದಾಗಲೇ ಇವರೆಲ್ಲರ ಒಲಿಂಪಿಕ್ಸ್‌ ಕನಸು ಛಿದ್ರಗೊಂಡಿತ್ತು. ಸಿಂಗಾಪುರಕ್ಕೆ ತೆರಳಿದರೂ ಅಲ್ಲಿ 21 ದಿನಗಳ ಕಠಿನ ಕ್ವಾರಂಟೈನ್‌ನಲ್ಲಿ ಇರಬೇಕಾಗಿತ್ತು. ಅಷ್ಟು ಕಾಲಾವಕಾಶ ಆಟಗಾರರ ಮುಂದಿರಲಿಲ್ಲ.

ಇದನ್ನೂ ಓದಿ :ಅಂತಾರಾಷ್ಟ್ರೀಯ ಕ್ರಿಕೆಟಿಗೆ ನ್ಯೂಜಿಲ್ಯಾಂಡ್‌ ಕೀಪರ್‌ ಬ್ರಾಡ್ಲಿ ವಾಟ್ಲಿಂಗ್ ನಿವೃತ್ತಿ

ಪರ್ಯಾಯ ಮಾನದಂಡ
ಒಲಿಂಪಿಕ್ಸ್‌ ಅರ್ಹತೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಿದ್ದ ಎರಡೂ ಕೂಟಗಳು ರದ್ದಾದುದರಿಂದ ಇದಕ್ಕೆ ಪರ್ಯಾಯ ಮಾನದಂಡವೊಂದನ್ನು ರೂಪಿಸಬೇಕೆಂದು ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಆಫ್ ಇಂಡಿಯಾ (ಬಿಎಐ) ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ಗೆ ಮನವಿ ಸಲ್ಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next