Advertisement

TDB ದೇಗುಲಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗೆ ಟಿಡಿಬಿ ಬ್ರೇಕ್‌

10:52 PM Oct 22, 2023 | Team Udayavani |

ತಿರುವನಂತಪುರ: ಅನುಮತಿ ಪಡೆಯದೇ ಕೇರಳದ ದೇಗುಲಗಳ ಆವರಣದಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಎಸ್‌ಎಸ್‌ಗೆ ತಿರುವಾಂಕೂರು ದೇವಸ್ಥಾನಗಳ ಮಂಡಳಿ(ಟಿಡಿಬಿ) ಎಚ್ಚರಿಕೆ ನೀಡಿದೆ.

Advertisement

ಈ ಸಂಬಂಧ ಟಿಡಿಬಿ ಆಯುಕ್ತರು ಶುಕ್ರವಾರ ಹೊಸದಾಗಿ ಆದೇಶ ಹೊರಡಿಸಿದ್ದಾರೆ. “ಅನುಮತಿ ಇಲ್ಲದೇ ದೇಗುಲಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಅಥವಾ ಇತರೆ ಧಾರ್ಮಿಕ ಸಂಘಟನೆಗಳು ನಡೆಸುವ ಕಾರ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ದೇಗುಲಗಳ ಆವರಣದಲ್ಲಿ ಯಾವುದೇ ಸಂಘಟನೆಯ ಅಥವಾ ರಾಜಕೀಯ ಪಕ್ಷಗಳ ಬಾವುಟಗಳು ಅಥವಾ ಪೋಸ್ಟರ್‌ಗಳನ್ನು ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆಯೂ ಕೂಡ ಇದೇ ರೀತಿಯ ಆದೇಶವನ್ನು ಹೊರಡಿಸಲಾಗಿತ್ತು. ಆದರೆ ಅದು ಪಾಲನೆ ಆಗುತ್ತಿರಲಿಲ್ಲ. ಆದರೆ ಈಗ ಕಠಿಣ ಕ್ರಮದ ಎಚ್ಚರಿಕೆಯೊಂದಿಗೆ ಆದೇಶ ಹೊರಡಿಸಲಾಗಿದೆ.

ಇದೇ ವೇಳೆ, ಈ ನಿಯಮಗಳು ಪಾಲನೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ದೇಗುಲಗಳಿಗೆ ನಿಯಮಿತವಾಗಿ ಅನಿರೀಕ್ಷಿತ ಭೇಟಿ ನೀಡುವಂತೆ ಟಿಡಿಬಿ ವಿಚಕ್ಷಣ ದಳಕ್ಕೆ ಆಯುಕ್ತರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next