ಕುಂದಾಪುರ: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಕಡಲಿಗಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದ್ದರೂ ನಾಮಫಲಕ ಅಳವಡಿಸಿದರೂ ಸೋಮವಾರ ಅದನ್ನು ನಿರ್ಲಕ್ಷಿಸಿ ಪ್ರವಾಸಿಗರು ತ್ರಾಸಿ ಮತ್ತು ಮರವಂತೆ ಬೀಚ್‌ಗಳಲ್ಲಿ ಸಮುದ್ರಕ್ಕಿಳಿದಿದ್ದರು.
ಸ್ಥಳದಲ್ಲಿ ಎಚ್ಚರಿಕೆಯ ಫಲಕವನ್ನು ಹಾಕಲಾಗಿದ್ದರೂ ಇಲ್ಲಿಗೆ ಬರುವ ಪ್ರವಾಸಿಗರು ನಿರ್ಲಕ್ಷಿಸುತ್ತಿರುವುದು ಆತಂಕ ಮೂಡಿಸಿದೆ. ಪ್ರವಾಸೋದ್ಯಮ ಇಲಾಖೆಯು ಗೃಹ ರಕ್ಷಕ ದಳದ ಇಬ್ಬರು ಸಿಬಂದಿಯನ್ನು ಪ್ರವಾಸಿ ಮಿತ್ರರನ್ನಾಗಿ ನೇಮಿಸಿಕೊಳುತ್ತದೆ.
ಇದನ್ನೂ ಓದಿ:ಕರಾವಳಿಯಾದ್ಯಂತ ಸಿಡಿಲು ಸಹಿತ ಭಾರೀ ಮಳೆ; ಹಲವೆಡೆ ಕೃತಕ ನೆರೆ ಸೃಷ್ಟಿ
ಆದರೆ ಸದ್ಯ ತ್ರಾಸಿ ಮತ್ತು ಮರವಂತೆಯಲ್ಲಿ ಪ್ರವಾಸಿಗರು ಕಡಲಿಗಿಳಿಯದಂತೆ ಕಾಯಲು ಒಬ್ಬ ಪ್ರವಾಸಿ ಮಿತ್ರನೂ ಇಲ್ಲ. ಆದಷ್ಟು ಶೀಘ್ರ ಸಂಬಂಧಪಟ್ಟ ಇಲಾಖೆಯವರು ಇಲ್ಲಿಗೆ ಪ್ರವಾಸಿ ಮಿತ್ರರನ್ನು ನೇಮಿಸಿ, ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.