Advertisement

ಅಧಿಕಾರಿಗಳ ಒತ್ತಡಕ್ಕೆ ಸಿಬ್ಬಂದಿ ಅಸಹಕಾರ!

03:02 PM Apr 13, 2021 | Team Udayavani |

ಯಾದಗಿರಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು 6ನೇ ವೇತನ ಜಾರಿ ಸೇರಿದಂತೆ ಹಲವು ಬೇಡಿಕೆಮುಂದಿಟ್ಟು ನಡೆಸುತ್ತಿರುವ ಮುಷ್ಕರ6ನೇ ದಿನ ಪೂರೈಸಿದ್ದು, ಸರ್ಕಾರ ಮತ್ತು ನೌಕರರ ಮಧ್ಯೆ ನೀ ಕೊಡೆ, ನಾ ಬಿಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಚಾಲಕ- ನಿರ್ವಾಹಕರು ಬಸ್‌ ನಿಲ್ದಾಣದಲ್ಲಿ ವಾಹನ ನಿಲ್ಲಿಸಿ ಅಸಹಕಾರ ತೋರುತ್ತಿರುವ ಪ್ರಶ್ನೆ ಉದ್ಭವವಾಗಿದೆ. ಎಲ್ಲೆಡೆ ಸಾರಿಗೆ ಸಿಬ್ಬಂದಿ ಮುಷ್ಕರಹತ್ತಿಕ್ಕಲು ನಿಗಮಗಳು ನೌಕರರ ಮೇಲೆ ವಿವಿಧ ಅಸ್ತ್ರ ಪ್ರಯೋಗಿಸುತ್ತಿವೆ ಎನ್ನುವಮಾತುಗಳು ನೊಂದ ನೌಕರರಿಂದ ಕೇಳಿ ಬರುತ್ತಿದ್ದು, ಸಾರಿಗೆ ಸಿಬ್ಬಂದಿ ಅಧಿಕಾರಿಗಳಒತ್ತಾಯಕ್ಕೆ ಮಣಿದು ಮನಸ್ಸಿಲ್ಲದೇ ವಾಹನ ಚಲಾಯಿಸುತ್ತಿರುವುದುಕಂಡು ಬರುತ್ತಿದೆ. ಯಾದಗಿರಿಯಿಂದ ಗುರುಮಠಕಲ್‌ ಮಾರ್ಗಕ್ಕೆತೆರಳಬೇಕಿದ್ದ ವಾಹನ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ನೆರೆಯ ತೆಲಂಗಾಣದಬಸ್‌ಗಳಲ್ಲಿ ಯಾದಗಿರಿ, ಗುರುಮಠಕಲ್‌ಮಾರ್ಗವಾಗಿ ಹೈದ್ರಾಬಾದ್‌ಗೆ ಜನರುಪ್ರಯಾಣಿಸುತ್ತಿದ್ದರು. ಆದರೆ ಈಶಾನ್ಯ ಸಾರಿಗೆ ಚಾಲಕ, ನಿರ್ವಾಹಕರು ನಾಮಕೇವಾಸ್ತೆ ಎನ್ನುವಂತೆ ವಾಹನವನ್ನು ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದರು.

ಯಾದಗಿರಿ ವಿಭಾಗದಲ್ಲೂ ನೌಕರರ ಎತ್ತಂಗಡಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಚಾಲಕ-ನಿರ್ವಾಹಕರು ಸೇರಿ ತಾಂತ್ರಿಕ ಸಿಬ್ಬಂದಿಯನ್ನೂ ಸಾರಿಗೆನಿಗಮಗಳು ಎತ್ತಂಗಡಿ ಮಾಡುತ್ತಿದ್ದು,ಗುರುಮಠಕಲ್‌ ಘಟಕದಿಂದ ಹಡಗಲಿ,ಸಂಡೂರ, ಯಾದಗಿರಿಯಿಂದಹಗರಿಬೊಮ್ಮನಹಳ್ಳಿ, ಕೊಪ್ಪಳದ ಕುಕನೂರ, ಭಾಲ್ಕಿ, ಶಹಾಪುರದಿಂದ ಹಡಗಲಿ ಘಟಕಗಳಿಗೆ ಚಾಲಕ-ನಿರ್ವಾಹಕರನ್ನು ವರ್ಗಾವಣೆ ಮಾಡಲಾಗಿದೆ.

ತೆಲಂಗಾಣ ಸಾರಿಗೆ ಸಂಖ್ಯೆ ಹೆಚ್ಚಳ?:

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನೆರೆಯ ತೆಲಂಗಾಣಸರ್ಕಾರದ ಸಾರಿಗೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ.ಮುಷ್ಕರದಿಂದ ಪ್ರಯಾಣಿಕರ ಸಂಖ್ಯೆ ಕುಂಠಿತವಾಗಿದ್ದು ಮೇಲ್ನೋಟಕ್ಕೆಕಂಡು ಬಂದರೂ ತೆಲಂಗಾಣ ಸರ್ಕಾರಕರ್ನಾಟಕ ಗಡಿಯಲ್ಲಿ ಹೆಚ್ಚಿನ ವಾಹನ ಸಂಚರಿಸುವಂತೆ ನೋಡಿಕೊಳ್ಳುತ್ತಿದೆ. ಈ ಭಾಗದಿಂದ ಕೊಡಂಗಲ್‌, ಪರಗಿಹಾಗೂ ಹೈದ್ರಾಬಾದ್‌ಗೆ ತೆರಳಲುರಾಜ್ಯದ ಪ್ರಯಾಣಿಕರು ಅನಿವಾರ್ಯವಾಗಿತೆಲಂಗಾಣ ಸಾರಿಗೆಯನ್ನೇ ಅವಲಂಬಿಸಿದ್ದಾರೆ.

Advertisement

ವೇತನ ಹೆಚ್ಚಳಕ್ಕೆ ನಾವೆಲ್ಲ ಹೋರಾಡುತ್ತಿದ್ದೇವೆ. ಅಧಿಕಾರಿಗಳು ಕರೆದಿದ್ದರಿಂದ ವಾಹನಚಲಾಯಿಸಿದೆ. ಭವಿಷ್ಯದಲ್ಲಿಉತ್ತಮ ಸಂಬಳ ಸಿಕ್ಕು ಇತರೆಸರ್ಕಾರಿ ನೌಕರರಂತೆ ನಮಗೂಸೌಲಭ್ಯಗಳು ಸಿಗಬೇಕಿದೆ. ಹಾಗಾಗಿಹೋರಾಟದಿಂದ ಹಿಂದೆ ಸರಿಯುವಮಾತಿಲ್ಲ. ನಮ್ಮ ಬೇಡಿಕೆಗೆ ಸ್ಪಂದಿಸಿಸರ್ಕಾರ ಸೌಲಭ್ಯ ನೀಡಲಿ.-ಹೆಸರು ಹೇಳಲಿಚ್ಛಿಸದ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next