Advertisement

ಬಾಗಲಕೋಟೆ : ಮಂಗಳವಾರ ರಾತ್ರಿಯೇ ತಟ್ಟಿದ ಮುಷ್ಕರ ಬಿಸಿ

09:43 PM Apr 06, 2021 | Team Udayavani |

ಬಾಗಲಕೋಟೆ : ಸಾರಿಗೆ ಸಂಸ್ಥೆಯ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗಾಗಿ ಏ. 7ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಬಾಗಲಕೋಟೆಯಲ್ಲಿ ಮುಷ್ಕರದ ಬಿಸಿ ಮಂಗಳವಾರ ರಾತ್ರಿಯೇ ತಟ್ಟಿದೆ.

Advertisement

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ವ್ಯಾಪ್ತಿಯಿಂದ ನಿತ್ಯ 443 ಬಸ್‌ಗಳು ಪ್ರಯಾಣಿಸುತ್ತವೆ. ನಿತ್ಯವೂ ಈ ಬಸ್‌ಗಳು ಜಿಲ್ಲೆಯಾದ್ಯಂತ ಓಡಾಡುತ್ತಿದ್ದವು. ಆದರೆ, ಮಂಗಳವಾರ ಬೆಳಗ್ಗೆಯಿಂದ ಸಂಜೆಯ ವರೆಗೆ ಈ ಬಸ್‌ಗಳು ಓಡಾಡಿದ್ದು, ರಾತ್ರಿ ಗ್ರಾಮೀಣ ಭಾಗಕ್ಕೆ ವಾಸ್ತವ್ಯ (ವಸತಿ ಬಸ್) ಹೋಗುತ್ತಿದ್ದ 121 ಬಸ್‌ಗಳು, ಯಾವುದೇ ಹಳ್ಳಿಗೆ ಹೋಗಿಲ್ಲ.
121 ಬಸ್‌ಗಳ ಚಾಲಕರು, ನಿರ್ವಾಹಕರು, ಮಂಗಳವಾರ ರಾತ್ರಿಯಿಂದಲೇ ಸೇವೆಗೆ ಬಂದಿಲ್ಲ. ಹೀಗಾಗಿ ಈ ಬಸ್‌ಗಳು ಹಳ್ಳಿಗೆ ಹೋಗಲು ಆಗಿಲ್ಲ. ಬುಧವಾರದಿಂದ ಮುಷ್ಕರ ಮತ್ತಷ್ಟು ಜೋರಾಗುವ ಸಾಧ್ಯತೆ ಇದ್ದು, ಎಷ್ಟು ಬಸ್‌ಗಳು ಸಂಚಾರಕ್ಕೆ ತೊಂದರೆಯಾಗಲಿದೆ ಎಂಬುದು ನಾಳೆಯೇ ಗೊತ್ತಾಗಲಿದೆ.

ಚಾಲಕ-ನಿರ್ವಾಹಕರ ಮುಷ್ಕರದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಘಟಕದಿಂದ 265 ರೂಟ್‌ಗಳ ಪಟ್ಟಿ ಮಾಡಿ, ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಅಽಕಾರಿಗೆ ನೀಡಿದ್ದು, ಈ ರೂಟ್‌ಗಳಲ್ಲಿ ಖಾಸಗಿ ಬಸ್‌ಗಳ ಓಡಾಟಕ್ಕೆ ಚಿಂತನೆ ನಡೆಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಬದಲು, ಕ್ರೂಜರ್, ಲಗ್ಜರಿ ಮಾತ್ರವಿದ್ದು, 265 ರೂಟ್‌ಗಳಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಹರಸಾಹಸಪಡಲಾಗುತ್ತಿದೆ.

ಇದನ್ನೂ ಓದಿ :ಅಪ್ಪ ಹೊಲದಲ್ಲಿ ; ಮಗ ಚಿನ್ನದ ಬೇಟೆಯಲ್ಲಿ ! ಸಾಲ ಮಾಡಿ ಕಲಿತ ಪದವಿಗೆ ಸಿಕ್ತು 14 ಚಿನ್ನ

ನೌಕರರ ಮುಷ್ಕರಿಗೆ ಎರಡು ಸಂಘಟನೆಯವರು ಬೆಂಬಲ ಕೊಟ್ಟಿಲ್ಲ. ಅವರು ಮಂಗಳವಾರ ಸೇವೆಗೆ ಬಂದಿದ್ದು, ಬುಧವಾರವೂ ಬರುವ ವಿಶ್ವಾಸವಿದೆ. ಜಿಲ್ಲೆಯ ಎಲ್ಲಾ ಘಟಕಗಳಲ್ಲಿ ನಿರ್ವಾಹಕ, ಚಾಲಕರು ಸೇವೆಗೆ ಬರುವುದಾಗಿ ಸಹಿ ಕೂಡ ಮಾಡಿದ್ದಾರೆ. ಆದರೆ, ಮಂಗಳವಾರ ಸಂಜೆಯೇ 121 ರೂಟ್‌ಗಳ ನೌಕರರು ಸೇವೆಗೆ ಬಂದಿಲ್ಲ. ನಾಳೆ ಎಷ್ಟು ಜನ ಗೈರು ಉಳಿಯುತ್ತಾರೋ ಅದರ ಮೇಲೆ ರೂಟಗಳಲ್ಲಿ ಕೊರತೆಯಾಗುವ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಸಾರಿಗೆ ಸಂಸ್ಥೆಯ ಸಾರಿಗೆ ಅಧಿಕಾರಿ ಪಡಿಯಪ್ಪ ಮೈತ್ರಿ ಉದಯವಾಣಿಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next