Advertisement
ಮಂಗಳೂರಿನ ಪುರಭವನದಲ್ಲಿ ಲೋಕಾಯುಕ್ತರ ಉಪಸ್ಥಿತಿಯಲ್ಲಿ ಶುಕ್ರವಾರ ಸಾರ್ವಜನಿಕ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಠಶೋಕ್ ಭಟ್ ಅವರು ದೂರು ಸಲ್ಲಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಸಾರಿಗೆ ಅದಾಲತ್ ನಡೆಸಬೇಕು ಎಂಬುದಾಗಿ ನಿಯಮ ಇದೆ. ಆದರೆ ಇದನ್ನು ಪಾಲಿಸಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಸಾರಿಗೆ ಅಧಿಕಾರಿ ಜಿ.ಎಸ್. ಹೆಗ್ಡೆ ಅವರು ಸಿಬಂದಿ ಕೊರತೆಯಿಂದಾಗಿ ಸಾರಿಗೆ ಅದಾಲತ್ ನಡೆಸಲು ಸಾಧ್ಯವಾಗಿಲ್ಲ ಎಂದರು. ಆದರೆ ಸಿಬಂದಿ ಕೊರತೆ ಮುಂದಿಟ್ಟು ಅದಾಲತ್ ನಡೆಸದಿರುವುದು ಸರಿಯಲ್ಲ. ತತ್ ಕ್ಷಣ ಕ್ರಮ ಕೈಗೊಂಡು 15 ದಿನಗಳಲ್ಲಿ ಅದಾಲತ್ ನಡೆಸಬೇಕು. ಮುಂದೆ ಎಂದಿನಂತೆ ನಿಯಮಿತ ಅದಾಲತ್ನಡೆಸಬೇಕು ಎಂದು ಸೂಚಿಸಿದರು.
Related Articles
Advertisement
ಲೋಕಾಯುಕ್ತ ಅಪರ ನಿಬಂಧಕ ಮೋಹನ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಜಿ.ಪಂ. ಸಿಇಒ ಡಾ| ಎಂ.ಆರ್. ರವಿ, ಲೋಕಾಯುಕ್ತ ಎಸ್‌ಪಿ ರೇಷ್ಮಾ ಜಿ.ಕೆ., ದ.ಕ. ಜಿಲ್ಲಾ ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು.
ಡಿ. 4 ರಂದು ಮತ್ತೆ ವಿಚಾರಣೆ ಸಾರ್ವಜನಿಕ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಬಾಕಿಯುಳಿದಿರುವ ಅರ್ಜಿಗಳನ್ನು ಡಿ. 4ರಂದು ಇತ್ಯರ್ಥಗೊಳಿಸಲಾಗುವುದು. ಅಂದು ಅಪರಾಹ್ನ 2.30ರಿಂದ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮ ನಡೆಯುವುದು. ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರಗಿಸಿ ಅದರ ಬಗ್ಗೆ ವರದಿಯನ್ನು ಡಿ. 4ರಂದು ನೀಡಬೇಕು ಎಂದು ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಸೂಚಿಸಿದರು.