Advertisement

ದೆಹಲಿಯಲ್ಲಿಂದು ಮೋಟಾರು ಕಾಯಿದೆ ವಿರೋಧಿಸಿ ಮುಷ್ಕರ

09:47 AM Sep 20, 2019 | keerthan |

ಹೊಸದಿಲ್ಲಿ: ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿಂದು ಮೋಟಾರು ವಾಹನ ಕಾಯಿದೆ ವಿರೋಧಿಸಿ ಮುಷ್ಕರ ನಡೆಯಲಿದೆ. ಸಾರಿಗೆ ಸಂಘಗಳು ಈ ಬಂದ್‌ ಗೆ ಕರೆಕೊಟ್ಟಿದ್ದು, ಇಂದು ಸಂಜೆಯವರೆಗೂ ಈ ಮುಷ್ಕರ ನಡೆಯಲಿದೆ.

Advertisement

ಆಟೋ ರಿಕ್ಷಾಗಳು, ಟ್ಯಾಕ್ಸಿಗಳು, ಆಪ್‌ ಆಧಾರಿತ ಕ್ಯಾಬ್‌ ಗಳು ಮತ್ತು ಖಾಸಗಿ ಬಸ್ ಗಳು ಇಂದು ರಸ್ತೆಗಿಳಿಯದಿರಲು  ನಿರ್ಧರಿಸಿದ್ದಾವೆ. ಹಲವು ಶಾಲಾ ಕಾಲೇಜುಗಳು ಕೂಡಾ ಇಂದು ರಜೆ ಘೋಷಣೆ ಮಾಡಿದ್ದು, ಬಂದ್‌ ಯಶಸ್ವಿಯಾಗುವ ನಿರೀಕ್ಷೆ ಇದೆ.

ಯುನೈಟೆಡ್‌ ಫ್ರಂಟ್‌ ಆಫ್‌ ಟ್ರಾನ್ಸಪೋರ್ಟ್‌ ಅಸೋಸಿಯೇಶನ್‌ ಈ ಒಂದು ದಿನದ ಬಂದ್‌ ಗೆ ಕರೆಕೊಟ್ಟಿದ್ದು, ಇದರಡಿಯಲ್ಲಿ 41 ಸಾರಿಗೆ ಸಂಸ್ಥೆಗಳು ಬರಲಿದೆ. ಹಾಗಾಗಿ ದೆಹಲಿಯಲ್ಲಿ ಇಂದು ಸಂಚಾರ ಸ್ಥಬ್ಧವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next