Advertisement
ಬೆಳಕಿನಹಬ್ಬ ದೀಪಾವಳಿ ಮತ್ತು ವಾರಾಂತ್ಯ ಜತೆಯಲ್ಲೇ ಬಂದಿದ್ದರಿಂದ ಸರಣಿ ರಜೆ ಇತ್ತು. ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಜನ ಊರುಗಳಿಗೆ ತೆರಳಿದ್ದರು. ಅವರೆಲ್ಲ ಸೋಮವಾರ ರಾಜಧಾನಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಇದರಲ್ಲಿ ಬಹುತೇಕರು ಕೆಎಸ್ಸಾರ್ಟಿಸಿ ಬಸ್ಗಳ ಮೂಲಕ ಬಂದಿಳಿದಿದ್ದು, ಒಂದೇ ದಿನ 1.23 ಕೋಟಿ ಜನ ಪ್ರಯಾಣಿಸಿದ್ದಾರೆ. ಇದು ಈವರೆಗಿನ ದಾಖಲೆಯಾಗಿದೆ.
Related Articles
ಇನ್ನು ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ (ನ. 3) ಕೆಎಸ್ಆರ್ಟಿಸಿಯ ಅವತಾರ್’ ಆನ್ಲೈನ್ ಬುಕಿಂಗ್ ಕೂಡ ದಾಖಲೆ ಬರೆದಿದೆ. ಅಂದು ಒಂದೇ ದಿನ 85,462 ಆನ್ಲೈನ್ ಸೀಟ್ಗಳು ಬುಕಿಂಗ್ ಆಗಿದ್ದು, ಇದರಿಂದ 5.59 ಕೋಟಿ ಆದಾಯ ಹರಿದುಬಂದಿದೆ. ಇದೇ ಹಬ್ಬದ ಸೀಜನ್ನಲ್ಲಿ ಅಂದರೆ ಅ. 30ರಂದು 67,033 ಆಸನಗಳು ಅವತಾರ್’ ಮೂಲಕ ಬುಕಿಂಗ್ ಮಾಡಲಾಗಿತ್ತು. ಅದರಿಂದ 4.63 ಕೋಟಿ ರೂ. ಆದಾಯ ಹರಿದುಬಂದಿದೆ ಎಂದೂ ಕೆಎಸ್ಆರ್ಟಿಸಿ ಎಂಡಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
Advertisement
ಹಬ್ಬದ ಹಿನ್ನೆಲೆಯಲ್ಲಿ ಗರಿಷ್ಠ ಪ್ರಯಾಣಿಕರು ಮತ್ತು ಗರಿಷ್ಠ ಬುಕಿಂಗ್ ಆಗಿದೆ. ಈ ಅಂಕಿ-ಅಂಶಗಳು ನಿಗಮಗಳ ಸೇವೆಗೆ ಹಿಡಿದ ಕನ್ನಡಿಯಾಗಿದೆ. ಜನರ ವಿಶ್ವಾಸ ಗಳಿಸುವಲ್ಲಿ ಸಾರಿಗೆ ನಿಗಮಗಳು ಯಶಸ್ವಿಯಾಗಿವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಇದರಲ್ಲಿ ಹಗಲು-ರಾತ್ರಿ ದುಡಿಯುತ್ತಿರುವ ಸಾರಿಗೆ ನೌಕರರು ಅದರಲ್ಲೂ ಚಾಲಕರು, ನಿರ್ವಾಹಕರ ಕೊಡುಗೆ ದೊಡ್ಡದಿದೆ.– ವಿ. ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ಟಿಸಿ