Advertisement

Bengaluru: ಎಚ್‌ಎಂಟಿ ವಶದಲ್ಲಿದ್ದ 5 ಎಕರೆಯನ್ನು ಮರು ವಶಕ್ಕೆ ಪಡೆದ ಅರಣ್ಯ ಇಲಾಖೆ

11:11 AM Oct 26, 2024 | Team Udayavani |

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರ ಸ್ವಾಮಿ ಅವರ ಆಕ್ಷೇಪದ ನಡುವೆಯೇ ಎಚ್‌ಎಂಟಿ ಕಂಪನಿ ವಶದಲ್ಲಿರುವ ಜಮೀನು ಮರುವಶಕ್ಕೆ ಪಡೆದ ಅರಣ್ಯ ಇಲಾಖೆ, ಆ ಜಾಗದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಫ‌ಲಕವನ್ನು ನೆಟ್ಟು ತನ್ನ ಹಕ್ಕು ಪ್ರತಿಪಾದಿಸಿದೆ.

Advertisement

ಎಚ್‌ಎಂಟಿ ವಶದಲ್ಲಿದ್ದ ಪೀಣ್ಯ- ಜಾಲಹಳ್ಳಿ ಸರ್ವೇ ನಂಬರ್‌ 1ರಲ್ಲಿ ಶುಕ್ರವಾರ ಜೆಸಿಬಿಯೊಂದಿಗೆ ಕಾರ್ಯಾ ಚರಣೆಗಿಳಿದ ಅರಣ್ಯ ಇಲಾಖೆ ಅಧಿಕಾರಿಗಳು, 5 ಎಕರೆ ಖಾಲಿ ಜಮೀನನ್ನು ಮರುವಶಕ್ಕೆ ಪಡೆದರು. ಇದರ ಮಾರುಕಟ್ಟೆ ಮೌಲ್ಯ 160 ಕೋಟಿ ರೂ. ಆಗಿದೆ.

ಎಚ್‌ಎಂಟಿ ಕಂಪನಿ ಜಮೀನನ್ನು ಅರಣ್ಯ ಒತ್ತುವರಿ ನೆಪದಲ್ಲಿ ರಾಜ್ಯ ಸರ್ಕಾರ ವಶಕ್ಕೆ ಪಡೆಯಲು ಮುಂದಾ ಗಿರುವುದು ಸರಿ ಅಲ್ಲ. ಕಂಪನಿ ವಶದಲ್ಲಿರುವ 599 ಎಕರೆ ಜಮೀನು ದಶಕಗಳ ಹಿಂದೆಯೇ ಹಣ ಪಾವತಿಸಿ ಪಡೆಯಲಾಗಿದೆ. ಅರಣ್ಯ ಒತ್ತುವರಿ ಮಾಡಿಕೊಂಡಿಲ್ಲ ಎಂದು ಈಚೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದರು.

ಈ ಮಧ್ಯೆಯೇ 5 ಎಕರೆ ಮರುವಶಕ್ಕೆ ಪಡೆಯಲಾಗಿದೆ. “1896 ಮೇ 29ರ ಸರ್ಕಾರದ ಅಧಿಸೂಚನೆ ಸಂಖ್ಯೆ 10407, ಎಫ್ಟಿಎಫ್ 153-95 ಮತ್ತು 1901ರ ಜನವರಿ 7ರ ಅಧಿಸೂಚನೆ ಸಂಖ್ಯೆ 422-ಎಫ್ಟಿಎಫ್-15-1900ರ ಪ್ರಕಾರ ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್‌ನಲ್ಲಿರುವ 599 ಎಕರೆ ಜಮೀನು ಅರಣ್ಯವಾಗಿರುತ್ತದೆ.

ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಈ ಜಮೀನು ಒಮ್ಮೆ ಅರಣ್ಯ ಎಂದು ಘೋಷಣೆಯಾದರೆ ಅದು ಯಾವಾಗಲೂ ಅರಣ್ಯಪ್ರದೇಶವೇ ಎಂಬ ಸುಪ್ರೀಂಕೋರ್ಟ್‌ ಅಭಿಪ್ರಾಯದಂತೆ ಒತ್ತುವರಿ ತೆರವುಗೊಳಿಸಿದ ಜಮೀನು ಅರಣ್ಯವೇ ಆಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next