ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರಕು ಸಾಗಾಣಿಕೆ ವಾಹನ ಗಳು ಹಾಗೂ ಸುಸ್ಥಿತಿಯಲ್ಲಿಲ್ಲದ ವಾಹನ ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವು ದನ್ನು ತಡೆಯಲು ಸಾರ್ವಜನಿಕರಿಗೆ ಜಾಗೃತಿ ಜಾಥಾ ನಡೆಸಿರುವುದು ಶ್ಲಾಘನೀಯ. ಆದರೆ, ವಿವಿಧ ಕಾರ್ಖಾನೆಗಳಿಗೆ ತೆರಳುವ ಸಹಸ್ರಾರು ಕಾರ್ಮಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ನೀಡಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ಸಮಯ ಪಾಲನೆ ಧಾವಂತ: ನಗರದ ಹೊರವಲಯದ ಕೈಗಾರಿಕಾ ಪ್ರದೇಶಕ್ಕೆ ಬೆಳಗ್ಗೆ 8 ಗಂಟೆಗೆ ಹಿಂದೂಪುರ ಪ್ಯಾಸೆಂಜರ್ ರೈಲಿ ನಲ್ಲಿ ಬರುವ ಸಾವಿರಾರು ಜನ ಕಾರ್ಮಿಕರು ಗಾರ್ಮೆಂಟ್ಸ್ ಸೇರಿದಂತೆ ಇತರೆ ಕಾರ್ಖಾನೆ ಗಳಿಗೆ ತಲುಪಲು ಸರಕು ಸಾಗಾಣಿಕೆ ವಾಹನ ಗಳನ್ನು ಅವಲಂಬಿಸಿರುತ್ತಾರೆ. ಸಾಮಾನ್ಯ ಕಾರ್ಮಿಕರಾದ ಅವರ ಗುರಿ ಸಮಯ ಪಾಲನೆ ಮಾತ್ರವಾಗಿರುತ್ತದೆ. ಸಮಯಕ್ಕೆ ಸರಿ ಯಾಗಿ ಕೆಲಸಕ್ಕೆ ಹೋಗದಿದ್ದರೆ ಇಡೀ ದಿನದ ಸಂಬಳಕ್ಕೆ ಕತ್ತರಿ ಬೀಳುತ್ತದೆ. ಇಂತಹ ಅವ ಕಾಶಗಳನ್ನು ಸರಕು ಸಾಗಾಣಿಕೆ ವಾಹನಗಳ ಮಾಲಿಕರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಹಲವಾರು ಬಾರಿ ಗಾರ್ಮೆಂಟ್ಸ್ ಗಳಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳು ಅಪಘಾತಗಳಿಗೆ ತುತ್ತಾಗಿ ಕಾರ್ಮಿಕರಿಗೆ ಗಾಯಗಳಾಗಿದ್ದರೂ ಯಾವುದೇ ಚಿಕಿತ್ಸೆಯಾಗಲಿ ಪರಿಹಾರವಾಗಲಿ ಸಿಕ್ಕಿಲ್ಲ ಎಂಬುದು ಕಾರ್ಮಿಕರ ಅಳಲಾಗಿದೆ.
ಬಸ್ ಸೌಲಭ್ಯ ಕಲ್ಪಿಸಿ: ರೈಲ್ವೆ ನಿಲ್ದಾಣ, ಡಿ.ಕ್ರಾಸ್ ಸೇರಿದಂತೆ ನಗರದ ವಿವಿಧ ಭಾಗ ಗಳಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಕೈಗಾರಿಕಾ ಪ್ರದೇಶಕ್ಕೆ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸು ವಂತೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಲೂಕಿನ ಕಾರ್ಮಿಕರು ದೂರಿದ್ದಾರೆ.
ಅವ್ಯವಸ್ಥೆಗೆ ಕಡಿವಾಣ ಹಾಕಿ: ಗಾರ್ಮೆಂಟ್‌ಗಳಿಗೆ ಗ್ರಾಮಾಂತರ ಪ್ರದೇಶಗಳಿಂದ ಈಗ ಕಾರ್ಮಿಕರನ್ನು ಕರೆತರುತ್ತಿರುವ ಖಾಸಗಿ ಬಸ್, ಮಿನಿ ಬಸ್‌ಗಳಿಗೆ ದಾಖಲೆ ಮೊದ ಲ್ಗೊಂಡು ಯಾವುದೇ ರೀತಿಯಲ್ಲೂ ರಸ್ತೆ ಮೇಲೆ ಚಲಿಸುವಷ್ಟು ಸುಸ್ಥಿತಿಯಲ್ಲಿಲ್ಲ. ಈ ಬಸ್‌ಗಳ ಚಾಲಕರು ಮಹಿಳಾ ಪ್ರಯಾಣಿಕ ರೊಂದಿಗೆ ನಡೆದುಕೊಳ್ಳುವ ರೀತಿಯಂತೂ ದೇವರಿಗೆ ಪ್ರೀತಿಯಾಗಬೇಕು. ಆದರೆ, ಮಹಿಳೆಯರಿಗೆ ಈ ಅವ್ಯವಸ್ಥೆಗಳನ್ನು ವಿರೋ ಧಿಸುವಷ್ಟು ಶಕ್ತಿ ಇಲ್ಲದಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಯಮಿತವಾಗಿ ವಾಹನಗಳ ಸ್ಥಿತಿಗತಿ ತಪಾಸಣೆ ಮಾಡಿದರೆ ಈ ಅವ್ಯವಸ್ಥೆಗಳಿಗೆ ಕಡಿವಾಣ ಬೀಳಲಿದೆ. ಜಾಗೃತಿ ಜಾಥಾ ನಡೆಸಿದ್ದಕ್ಕೂ ಪ್ರತಿಫಲ ದೊರೆಯಲಿದೆ ಎನ್ನುತ್ತಾರೆ ಗಾರ್ಮೆಂಟ್ಸ್ ಉದ್ಯೋಗಿಗಳು.
ಸರಕು ಸಾಗಣೆ ವಾಹನಗಳೇ ಗತಿ: ಈಗಾಗಲೇ ಬಹುತೇಕ ಕಾರ್ಮಿಕರು ಅನಿವಾರ್ಯವಾಗಿ ಸರಕು ಸಾಗಾಣಿಕೆ ಅಥವಾ ಇತರೆ ಸುವ್ಯವಸ್ಥೆಯಿಲ್ಲದ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ತಪ್ಪಿಸಲು ಪರ್ಯಾಯ ವ್ಯವಸ್ಥೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಳಗ್ಗೆ, ಸಂಜೆ ವೇಳೆ ರೈಲ್ವೆ ನಿಲ್ದಾಣದಿಂದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ವಿವಿಧೆಡೆಗಳಿಗೆ ಬಿಎಂಟಿಸಿ ಬಸ್‌ಗಳು ಸಂಚರಿ ಸುವಂತೆ ಮಾಡಬೇಕು. ಕೈಗಾರಿಕೆಗಳ ಮಾಲಿಕ ರಿಗೆ ಕಾರ್ಮಿಕರನ್ನು ಕರೆದೊಯ್ಯಲು ಸರಿ ಯಾದ ಸುಸ್ಥಿತಿಯಲ್ಲಿರುವ ವಾಹನಗಳನ್ನು ಕಡ್ಡಾಯವಾಗಿ ಒದಗಿಸುವಂತೆ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದ್ದಾರೆ.
ಸುಸ್ಥಿತಿಯಲ್ಲಿರುವ ಖಾಸಗಿ ಬಸ್‌ಗಳು ರಸ್ತೆ ಮೇಲೆ ಓಡಾಡುವಂತೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿಮೆ, ವಾಹನ ಚಾಲನಾ ಪರವಾನಗಿ, ವಾಹನಗಳಿಗೆ ಸಂಬಂಧಿಸಿದ ದಾಖಲೆಗಳು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಕಾರ್ಮಿಕರು ಸಂಬಂಧಪಟ್ಟ ಇಲಾಖೆಗಳನ್ನು ಆಗ್ರಹಿಸಿದ್ದಾರೆ.