Advertisement

ಗ್ರಾಮೀಣ ಭಾಗಕ್ಕೆ ಸಾರಿಗೆ ಸೌಲಭ್ಯ ಶೀಘ್ರ

12:41 PM Jun 10, 2019 | Team Udayavani |

ಶಿರಾ: ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರಾದ ನಂತರ ಹಂತ ಹಂತವಾಗಿ ನಿಗಮ ಮೂಲಗಳ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದು, ಗ್ರಾಮೀಣ ಸಾರಿಗೆ ಕಡೆ ಹೆಚ್ಚಿನ ಗಮನ ಹರಿಸುವುದರ ಮೂಲಕ ಗ್ರಾಮೀಣ ಸಾರಿಗೆ ರಸ್ತೆಗೆ ತುರ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ ತಿಳಿಸಿದರು.

Advertisement

ನಗರದ ಸಾರಿಗೆ ಘಟಕದಲ್ಲಿ ಶನಿವಾರ ನಡೆದ ಸಾರಿಗೆ ಅದಾಲತ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಳ್ಳಿಗೆ ಸಾರಿಗೆ ಸೌಲಭ್ಯ: ನನಗೆ ಈ ಇಲಾಖೆ ಹೊಸದಾಗಿರಬಹುದು. ಆದರೆ ಸದರಿ ಇಲಾಖೆಯಲ್ಲಿ ಒಳ್ಳೆ ಸಾಧನೆ ಮಾಡುವ ಹಂಬಲ ನನಗಿದೆ. ಬರದ ನಾಡುಗಳ ಅನೇಕ ಗ್ರಾಮೀಣ ಭಾಗಗಳು ಇಂದಿಗೂ ಕೆಂಪು ಬಸ್ಸಿನ ಮುಖ ನೋಡದ ಹಳ್ಳಿಗಳಿವೆ. ಅಂತಹ ಅಗತ್ಯವಾದ ಗ್ರಾಮೀಣ ಪ್ರದೇಶಗಳ ಹಳ್ಳಿಗೆ ಸಾರಿಗೆ ಸೌಲಭ್ಯ ಒದಗಿಸಬೇಕಾಗಿದೆ ಎಂದರು.

ಚಿತ್ರದುರ್ಗದ ವಿಭಾಗಕ್ಕೆ ಶಿರಾ ಘಟಕವನ್ನು ಈ ಹಿಂದೆ ಸೇರಿಸಲಾಗಿತ್ತು. ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ನಾನು ನಿಗಮದ ಅಧ್ಯಕ್ಷನಾದ ಕೋಡಲೇ ಶಿರಾ ಘಟಕವನ್ನು ತುಮಕೂರಿಗೆ ಮತ್ತೆ ವರ್ಗಾಯಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.

ಸಾರಿಗೆ ಅದಾಲತ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕುಂದು ಕೊರತೆಗಳ ಬಗ್ಗೆಯೂ ಚರ್ಚಿಸಲಾಗಿ ಸಾರ್ವಜನಿಕರು ಸಾರಿಗೆ ನಿಗಮದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು.

Advertisement

ನಗರಕ್ಕೆ ಬರುತ್ತಿಲ್ಲ ಬಸ್‌: ಶಿರಾ ನಗರದ ಬಿಜೆಪಿ ಘಟಕದ ಅಧ್ಯಕ್ಷ ಬಿ.ಗೋವಿಂದಪ್ಪ ಮಾತನಾಡಿ, ಸತ್ಯನಾರಾಯಣ ಅಧ್ಯಕ್ಷರಾದ ನಂತರ ಚಿತ್ರದುರ್ಗಕ್ಕೆ ಸೇರಿದ್ದ ಶಿರಾ ಘಟಕವನ್ನು ಮತ್ತೆ ತುಮಕೂರು ವಿಭಾಗಕ್ಕೆ ಸೇರ್ಪಡೆ ಮಾಡಿಸಿದ್ದಕ್ಕೆ ಹೆಮ್ಮೆ ಇದೆ. ಈವರೆಗೂ ರಾತ್ರಿ 8 ಗಂಟೆ ನಂತರ ಬೆಂಗಳೂರು-ತುಮಕೂರು ಮಾರ್ಗವಾಗಿ ಬರುವ ಸಾರಿಗೆ ಬಸ್‌ಗಳು ಶಿರಾ ನಗರಕ್ಕೆ ಬರುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರು ನೀಡಿದರೂ ಪ್ರಯೋಜನವಾಗಿಲ್ಲ. ಚಾಲಕ, ನಿರ್ವಾಹಕರು ಪ್ರಯಾಣಿಕರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.

ಡಿಎಸ್‌ಎಸ್‌ ಕಾರ್ಯಕರ್ತ ನರಸಿಂಹಯ್ಯ ಮಾತನಾಡಿ, ದೊಡ್ಡ ಆಲದಮರದ ಮೂಲಕ ಕಾಳಾಪುರದ ಮಾರ್ಗವಾಗಿ ಬಡವನಹಳ್ಳಿ ಕಥಮರದವರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಈ ಭಾಗದ ಜನಕ್ಕೆ ಅನುಕೂಲವಾಗಲಿದೆ ಎಂದರು.

ಸಮಸ್ಯೆ ನಿವಾರಿಸುವ ಭರವಸೆ: ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಪ್ರಸನ್ನಕುಮಾರ್‌ ಬಾಲಾನಾಯ್ಕ ಮಾತನಾಡಿ, ಸಾರ್ವಜನಿಕರ ಅಹವಾಲುಗಳಿಗೆ ನಿಗಮ ಕೂಡಲೇ ಗಮನಹರಿಸಲಿದೆ ಎಂದು ಭರವಸೆ ನೀಡಿದರು.

ಸೀಗಲಹಳ್ಳಿ ವೀರೇಂದ್ರ ಮಾತನಾಡಿ, ಪ.ನಾ.ಹಳ್ಳಿ ಸಮೀಪದ ಸೀಗಲಹಳ್ಳಿ ಒಂದು ಕುಗ್ರಾಮದಂತಾಗಿದೆ. ಈ ಗ್ರಾಮದಿಂದ ನಡೆದುಕೊಂಡು ಮುಖ್ಯರಸ್ತೆಗೆ ಬಂದು ಶಿರಾ ಕಡೆ ಬಸ್‌ ಹತ್ತಬೇಕಿದ್ದು, ಈ ಮಾರ್ಗವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

ತಾಲೂಕು ಪಂಚಾಯಿತತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್‌, ಜಿಪಂ ಸದಸ್ಯ ರಾಮಕೃಷ್ಣ, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್‌, ಮುಖ್ಯ ಇಂಜಿನಿಯರ್‌ ಜಗದೀಶ್‌ಚಂದ್ರ, ಎಕ್ಸಿಕ್ಯೂಟೀವ್‌ ಇಂಜಿನಿಯರ್‌ ನಾರಾಯಣಸ್ವಾಮಿ, ರೇಣುಕೇಶ್‌, ಡಿಟಿಒ ಫ‌ಕೃದ್ದೀನ್‌, ವಿಜಯ್‌ಕುಮಾರ್‌ ಮುಂತಾದರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next