ಶಿವಮೊಗ್ಗ: ಸರಕಾರಿ ನೌಕರರನ್ನಾಗಿ ಮಾಡಬೇಕು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನಿಗಮಗಳ ನೌಕರರ ಮುಷ್ಕರ ಹಿನ್ನೆಲೆ, ಶಿವಮೊಗ್ಗ ವಿಭಾಗದ 330 ಬಸ್ ಗಳ ಪೈಕಿ 16 ಬಸ್ ಗಳು ಮಾತ್ರ ಸಂಚಾರ ಆರಂಭಿಸಿವೆ.
ಶಿವಮೊಗ್ಗ- ಭದ್ರಾವತಿ ಅವಳಿ ನಗರಗಳ ನಡುವೆ ನಗರ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಮಾತ್ರವಲ್ಲದೆ ಶಿವಮೊಗ್ಗ-ಭದ್ರಾವತಿ, ಉಡುಪಿ – ಮಣಿಪಾಲ್ ಕಡೆಗೆ ತಲಾ 4 ಬಸ್ ಗಳ ಸಂಚಾರ ಈಗಾಗಲೇ ಆರಂಭವಾಗಿದೆ.
ಇನ್ನುಳಿದಂತೆ ಮೈಸೂರು, ಚಿತ್ರದುರ್ಗ, ಹೊನ್ನಾಳಿ, ಶಿಕಾರಿಪುರ ಕಡೆಗೆ ಕೆಲವು ಬಸ್ ಗಳು ಸಂಚರಿಸಿವೆ. ಪ್ರಯಾಣಿಕರಿಲ್ಲದೇ ಶಿವಮೊಗ್ಗದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಭಣಗುಡುತ್ತಿದೆ.
ಸಾರಿಗೆ ನಿಗಮದ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲೇ ಉಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
Related Articles
ಇದನ್ನೂ ಓದಿ: ಬಾಗಲಕೋಟೆಯಿಂದ ಉಡುಪಿಗೆ ಬಂದು ಬದುಕು ಕಟ್ಟಿಕೊಂಡ ಬಸವರಾಜ್ | Udayavani