Advertisement

ನಗರದಲ್ಲಿ ಮತ್ತೆ ಮೂವರಿಗೆ ರೂಪಾಂತರ ಕೋವಿಡ್ ಸೋಂಕು ದೃಢ

08:50 PM Jan 01, 2021 | Team Udayavani |

ಬೆಂಗಳೂರು: ನಗರದಲ್ಲಿ ಮತ್ತೆ ಮೂವರಲ್ಲಿ ರೂಪಾಂತರ ಕೊರೊನಾ ಸೋಂಕು ದೃಢಪಡುವ ಮೂಲಕ ನಗರಕ್ಕೆ ಬ್ರಿಟನ್‌ನಿಂದ ಬಂದ ಐವರು ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದ ಒಬ್ಬರಿಗೆ ರೂಪಾಂತರ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ನಗರದಲ್ಲಿ ಒಟ್ಟು ಆರು ಜನರಿಗೆ ರೂಪಾಂತರ ಕೋವಿಡ್ ಸೋಂಕು ದೃಢಪಟ್ಟಂತಾಗಿದೆ.

Advertisement

ಬ್ರಿಟನ್‌ನಿಂದ ಬೆಂಗಳೂರಿನ ಪಶ್ಚಿಮ ವಲಯದ ರಾಜಾಜಿ ನಗರಕ್ಕೆ ಬಂದಿದ್ದ ಮಹಿಳಿಗೆ ರೂಪಾಂತರ ಕೋವಿಡ್ ಸೋಂಕು ದೃಢಪಟ್ಟಿದ್ದು, ಇವರ ಪ್ರಾಾಥಮಿಕ ಸಂರ್ಪಕದಲ್ಲಿದ್ದ ಸೋಂಕಿತರ ತಾಯಿಗೂ ರೂಪಾಂತರ ಕೊರೊನಾ ಸೋಂಕು ದೃಢಪಟ್ಟಿದೆ. ಬೊಮ್ಮನಹಳ್ಳಿಿಯಲ್ಲಿ ಮತ್ತೊಬ್ಬರಿಗೆ ರೂಪಾಂತರ ಕೊರೊನಾ ಸೋಂಕು ದೃಢಪಡುವ ಮೂಲಕ ಒಂದೇ ವಲಯದಲ್ಲಿ ಮೂವರಿಗೆ ರೂಪಾಂತರ ಕೋವಿಡ್ ಸೋಂಕು ದೃಢಪಟ್ಟಂತಾಗಿದೆ.

ರೂಪಾಂತರ ಕೋವಿಡ್ ಸೋಂಕು ದೃಢಪಟ್ಟವರ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ರೂಪಾಂತರ ಕೋವಿಡ್ ಸೋಂಕು ದೃಢಪಟ್ಟ ಇಬ್ಬರನ್ನು ನಗರ ಕೆ.ಸಿ ಜನರಲ್ ಹಾಗೂ ಮತ್ತೊಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಾಧಿಕಾರಿ ಡಾ. ವಿಜಯೇಂದ್ರ ಅವರು ತಿಳಿಸಿದ್ದಾಾರೆ.

Advertisement

Udayavani is now on Telegram. Click here to join our channel and stay updated with the latest news.

Next