Advertisement

ಡಿಜಿಟಲೀಕರಣದಿಂದ ಪಾರದರ್ಶಕ ಆಡಳಿತ

06:27 AM May 29, 2020 | Lakshmi GovindaRaj |

ಮಾಲೂರು: ಸಹಕಾರ ಬ್ಯಾಂಕ್‌ಗಳು ಮತ್ತು ಸೇವಾ ಸಂಘಗಳ ಆರ್ಥಿಕ ವ್ಯವಹಾರವನ್ನು ಡಿಜಿಟಲೀಕರಣ ಮಾಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ  ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ತಾಲೂಕಿನ ಚಿಕ್ಕತಿರುಪತಿಯ ಕೃಷಿ ಸೇವಾ ಸಹಕಾರ ಬ್ಯಾಂಕಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸಹಕಾರ ಕ್ಷೇತ್ರದ ಡಿಜಿಟಲೀಕರಣ  ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕೋಲಾರ ಜಿಲ್ಲೆಯ ಪವಿತ್ರ ಯಾತ್ರ ಸ್ಥಳವಾಗಿರುವ ಚಿಕ್ಕ  ತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ಸೇವಾ ಸಹಕಾರ ಬ್ಯಾಂಕಿನಿಂದ ಎರಡೂ ಜಿಲ್ಲೆಗಳ ಡಿಜಿಟಲೀಕರಣಕ್ಕೆ  ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ಮೊಬೈಲ್‌ನಲ್ಲೇ ಮಾಹಿತಿ: ಎರಡೂ ಜಿಲ್ಲೆಗಳ 200 ಸಹಕಾರ ಬ್ಯಾಂಕ್‌ಗಳು ಮತ್ತು ಸೇವಾ ಸಂಘಗಳ ಹಣಕಾಸಿನ ವ್ಯವಹಾರವು ಗುರುವಾರದಿಂದಲೇ ಕಂಪ್ಯೂಟರೀಕರಣವಾಗಿ ಸಹ  ಕಾರ ಸೇವೆಗಳು ರೈತರಿಗೆ ನೇರವಾಗಿ ತಲುಪಲಿವೆ.  ಸಹಕಾರ ಬ್ಯಾಂಕಿನ ಎಲ್ಲಾ ಆರ್ಥಿಕ ವಹಿವಾಟುಗಳು ಪಾರದರ್ಶಕವಾಗುವ ಜೊತೆಗೆ ಖಾತೆಯ ಸಂಪೂರ್ಣ ಮಾಹಿತಿಯನ್ನು ರೈತರು ತಮ್ಮ ಮೊಬೈಲ್‌ ಫೋನ್‌ಗಳ ಮೂಲಕವೇ ನೋಡಲು ಸಾಧ್ಯವಾಗಲಿದೆ ಎಂದು ವಿವರಿಸಿದರು.

ಸಬಲಿಕರಣ: ರೈತರು ಮತ್ತು ಬ್ಯಾಂಕಿನ ಹಣ ದುರುಪಯೋಗ  ವಾಗುವ ಸಾಧ್ಯತೆಗಳು ಇನ್ನು ಮುಂದೆ ಇರುವುದಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕಿನ ವತಿಯಿಂದ ರೈತರು ಮತ್ತು ಮಹಿಳೆಯರಿಗೆ  ಕೋಟ್ಯಂತರ ರೂ. ಸಾಲ ನೀಡಿ ರೈತ ಮತ್ತು ಮಹಿಳಾ ಸಬಲೀಕರಣಕ್ಕೆ ಡಿಸಿಸಿ ಬ್ಯಾಂಕ್‌ ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿಯೂ ಆಡಳಿತ ಮತ್ತು ಬ್ಯಾಂಕಿಂಗ್‌ ಸೇವೆಗಳನ್ನು ಮತ್ತಷ್ಟು ಉತ್ತಮ ಪಡಿಸುವ  ಕಾರ್ಯವಾಗಲಿದ್ದು, ಡಿಜಿಟಲೀಕರಣದಿಂದ ರೈತರು ತಮ್ಮ ಖಾತೆಯಲ್ಲಿನ ಹಣದ ಸಂಪೂರ್ಣ ಮಾಹಿತಿಯನ್ನು ನೇರವಾಗಿ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

Advertisement

ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಕೆ.ಎಚ್‌.ಚನ್ನರಾಯಪ್ಪ, ಕೇಂದ್ರ  ಸಹಕಾರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ರವಿ, ಯೋಜನಾ ನಿರ್ದೇಶಕ ಶಿವಕುಮಾರ್‌, ಮಾಲೂರು ತಾಲೂಕು ಡಿಸಿಸಿ ಬ್ಯಾಕಿನ ಮೇಲ್ವಿಚಾರಕ ವಿ.ಕೃಷ್ಣಪ್ಪ, ಸಿಇಒ ಗಳಾದ ಎಂ.ಶಿವಶಂಕರ್‌, ಎಚ್‌.ವಿ. ತಿರುಮೇಗೌಡ,  ಎಂ .ಸುಧಾಕರ್‌, ವೇಣುಗೋಪಾಲ್‌, ಯೋಗೀಶ್‌, ಚಿಕ್ಕತಿರುಪತಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್‌.ಬಿ.ಮುನಿರಾಜು,

ಉಪಾ ಧ್ಯಕ್ಷ ಆರ್‌.ಶ್ರೀಧರ್‌, ನಿರ್ದೇಶಕ ಶಂಕರ್‌ ನಾರಾ ಯಣಗೌಡ, ಜಿ.ವಿ. ಮಂಜುನಾಥ್‌,  ಟಿ.ಎಂ.ರಾಮ್‌ಪ್ರಸಾದ್‌, ಜಿ.ರಾಮಮೂರ್ತಿ, ಎಸ್‌.ನಾಗರಾಜು, ನಾರಾಯ ಣಮ್ಮ, ನಾಗರತ್ಮಮ್ಮ, ಇಸ್ಟಾಪ್‌ ಟೆಕ್ನಾಲಜಿಸ್‌ನ ಲಲಿತ್‌ಪ್ರಸಾ ನ್ನದ್‌, ಸತೀಶ್‌ಹಂಪಹೊಳ್ಳ, ಎ.ಇ.ಫ‌ರ್ನಾಂಡಿಸ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next