Advertisement

ಎಚ್ಚರದಿಂದ ಅನುವಾದ ಮಾಡಿ

10:58 AM Jul 22, 2018 | |

ಬೆಂಗಳೂರು: ಅನುವಾದಕರು ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬಾರದಂತೆ ಅನುವಾದ ಮಾಡಬೇಕು ಎಂದು ಕವಿ ಡಾ.ಸಿದ್ದಲಿಂಗಯ್ಯ ಹೇಳಿದರು. ಪ್ರಸ್‌ಕ್ಲಬ್‌ ಸಭಾಂಗಣದಲ್ಲಿ ಶನಿವಾರ ಹೆಮ್ಮರ ಪ್ರಕಾಶನ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಶ್ಯಾಮ್‌ ಪ್ರಸಾದ್‌ ಅವರ ಆಂಗ್ಲ ಕೃತಿಯನ್ನು ಡಾ.ಎಸ್‌.ಚಂದ್ರ ಮೋಹನ್‌ ಕನ್ನಡಕ್ಕೆ ಅನುವಾದಿಸಿರುವ “ನಿಗೂಢ ಕರ್ನಾಟಕ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Advertisement

ಅನುವಾದಕರು ಒಂದು ಭಾಷೆಯಿಂದ ಮತ್ತೂಂದು ಭಾಷೆಗೆ ಅನುವಾದ ಮಾಡುವಾಗ ಸ್ವಲ್ಪ ಎಡವಿದರೂ, ಅನುವಾದಿಸಿರುವ ವಿಷಯ ಗೊಂದಲಮಯವಾಗುತ್ತದೆ. ಹೀಗಾಗಿ, ಎಚ್ಚರಿಕೆಯಿಂದ ಅನುವಾದ ಮಾಡಬೇಕು ಎಂದು ಸಲಹೆ ನೀಡಿದರು.

ಹುದುಗಿ ಹೋಗಿರುವ ಸತ್ಯಗಳನ್ನು ಬಯಲಿಗೆ ತರುವ ನಿಟ್ಟಿನಲ್ಲಿ ಲೇಖಕ ಶ್ಯಾಮ್‌ ಪ್ರಸಾದ್‌ ಅವರ ಪ್ರಯತ್ನ ಶ್ಲಾಘನೀಯ. ಆಂಗ್ಲ ಭಾಷೆಯಲ್ಲಿ ಮೂಡಿ ಬಂದಿರುವ ಕೃತಿಯನ್ನು ಅನುವಾದಕ ಚಂದ್ರಮೋಹನ್‌ ಮೂಲ ಆಶಯಕ್ಕೆ ಭಂಗವಾಗದ ರೀತಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

ಚಿತ್ರ ನಿರ್ದೇಶಕ ಬಿ.ಸುರೇಶ್‌ ಮಾತನಾಡಿ, ಅನುವಾದಕರು ಸ್ಥಳೀಯ ಭಾಷೆಯವರಾಗಿದ್ದರೆ ಮಾತ್ರ, ಸಮಗ್ರ ಅನುವಾದ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅನುವಾದದ ದಾರಿ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next