ನವದೆಹಲಿ: ಬೆಂಗಳೂರಿನ ಚಿಕ್ಕಬಾಣಾವರದ ಮನೆಯಲ್ಲಿ ಸ್ಫೋಟಕ ಪತ್ತೆ ಪ್ರಕರಣ ಸಂಬಂಧ ಎನ್‌ಐಎ ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಮೊಹಮ್ಮದ್ ನಜೀರ್ ಶೇಖ್ ಎಂಬಾತನನ್ನು ಬಂಧಿಸಿದೆ. ಮಂಗಳವಾರ ಈತನನ್ನು ಬಂಧಿಸಲಾಗಿದೆ. ಕೋರ್ಟ್‌ಗೆ ಶೇಖ್‌ನನ್ನು ಹಾಜರುಪಡಿಸಿ, ಬೆಂಗಳೂರಿಗೆ ಟ್ರಾನ್ಸಿಟ್ ರಿಮಾಂಡ್ ಮೂಲಕ ಕರೆದುಕೊಂಡು ಹೋಗಲು ಅನುಮತಿ ಪಡೆಯಲಾಗಿದೆ.
Advertisement
ಬಂಧಿತ ನಜೀರ್ ಶೇಖ್ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ನಿವಾಸಿಯಾಗಿದ್ದು, ಜಹೀದುಲ್ ಇಸ್ಲಾಂ, ನಸ್ರುಲ್ ಇಸ್ಲಾಂ, ಆಸಿಫ್ ಇಕ್ಬಾಲ್ ಮತ್ತು ಇತರರ ನೆರವಿನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ.