Advertisement
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರೈತರ ಟ್ರಾನ್ಸ್ ಫಾರ್ಮರ್ ಬದಲಾವಣೆಯನ್ನು ದೂರು ಸಲ್ಲಿಕೆಯಾದ 24 ಗಂಟೆಯೊಳಗೆ ಮಾಡಬೇಕೆಂಬ ಗುರಿ ಸಾಧನೆಯಲ್ಲಿ ಇಂಧನ ಇಲಾಖೆ ಈಗ ಶೇ. 100ರಷ್ಟು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದ್ದು, ಸದ್ಯಕ್ಕೆ 10248 ಟ್ರಾನ್ಸ್ ಫಾರ್ಮರ್‌ಗಳ ದಾಸ್ತಾನು ಲಭ್ಯವಿದೆ. ರೈತರ ಮನವಿಗೆ ಸ್ಪಂದಿಸುವ ಮೂಲಕ ಜನಸ್ನೇಹಿ ಕಾರ್ಯದಲ್ಲಿ ಉಳಿದ ಇಲಾಖೆಗಿಂತ ನಮ್ಮ ಇಲಾಖೆ ಒಂದು ಹೆಜ್ಜೆ ಮುಂದೆ ಸಾಗಿದೆ.
Related Articles
Advertisement
ಈ ಹಿಂದೆ ಪರಿವರ್ತಕ ಬದಲಾವಣೆ ವ್ಯವಸ್ಥೆ ಶೋಚನೀಯವಾಗಿತ್ತು. ರೈತರು ದೂರು ನೀಡಿ ಬದಲಾವಣೆಗೆ ಅರ್ಜಿ ಸಲ್ಲಿಸಿದ ಬಳಿಕ ತಿಂಗಳಾನುಗಟ್ಟಲೆ ಕಾಯಬೇಕಿತ್ತು. ನಾನಾ ಕಾರಣಗಳನ್ನು ನೀಡಿ ವಿಳಂಬ ಮಾಡಲಾಗುತ್ತಿತ್ತು. ಇದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗು ತ್ತಿತ್ತು. ಅಲ್ಲದೆ ವಿಫಲಗೊಂಡ ಪರಿವರ್ತಕಗಳನ್ನು ರೈತರು ಎತ್ತಿನಗಾಡಿ ಅಥವಾ ತಮ್ಮ ವಾಹನಗಳಲ್ಲಿ ಆಯಾ ಸರಬರಾಜು ಕಚೇರಿಗೆ ತಲುಪಿಸುತ್ತಿದ್ದರು. ಆದರೆ ರಾಜ್ಯ ಸರಕಾರ ಈ ಪದ್ಧತಿಯಲ್ಲೂ ಬದಲಾವಣೆ ತಂದಿದೆ. ಈಗ ವಿಫಲಗೊಂಡ ಪರಿವರ್ತಕವನ್ನು ಇಲಾಖೆ ವತಿಯಿಂದಲೇ ಉಚಿತವಾಗಿ ಸಾಗಿಸಿ ಹೊಸ ಟ್ರಾನ್ಸ್ ಫಾರ್ಮರ್ ಸರಬರಾಜು ಮಾಡಲಾಗುತ್ತದೆ.