Advertisement

ಪರಿವರ್ತನೆಯ ಕೆಲಸ: ಡಾ|ವೀರೇಂದ್ರ ಹೆಗ್ಗಡೆ

09:28 PM Oct 20, 2019 | Sriram |

ಬೆಳ್ತಂಗಡಿ: ದುಶ್ಚಟಕ್ಕೆ ಒಳಗಾದ ವ್ಯಕ್ತಿಗಳ ಮುಖಕ್ಕೆ ಕನ್ನಡಿ ಹಿಡಿದು ಅವರ ಮೂಲಸ್ವರೂಪ ತೋರಿಸಿ ಪರಿವರ್ತನೆ ಮಾಡುವ ಕೆಲಸವನ್ನು ಮದ್ಯವರ್ಜನ ಶಿಬಿರಗಳ ಮೂಲಕ ಮಾಡಲಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿ ಕಾರಿ
ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಉಜಿರೆಯ ಲಾೖಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ 145ನೇ ವಿಶೇಷ ಮದ್ಯ ವರ್ಜನ ಶಿಬಿರದ 5ನೇ ದಿನದಂದು 83 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಳಿಕ ಶಿಬಿರಾರ್ಥಿಗಳೊಂದಿಗೆ ವೈಯಕ್ತಿ ವಾಗಿ ಮಾತನಾಡಿದ ಡಾ| ಹೆಗ್ಗಡೆ, ಮದ್ಯವರ್ಜನ ಶಿಬಿರದ ಅನಂತರ ಈ ದಿವಸ ಕುಡಿಯಲ್ಲ ಎಂದು ಪ್ರತೀದಿನ ದೃಢಸಂಕಲ್ಪ ಮಾಡಬೇಕು. ಹೀಗೆ ಮಾಡಿ ದಾಗ ಮಾತ್ರ ಮದ್ಯ ಮುಕ್ತ ನಾಗಿ ಜೀವನ ಮಾಡಲು ಸಾಧ್ಯ. ಮದ್ಯಮುಕ್ತರಾದ ನೀವು ಇತರ ಮದ್ಯ ವ್ಯಸನಿಗಳನ್ನು ಕರೆತಂದು ಮದ್ಯಮುಕ್ತರನ್ನಾಗಿ ಮಾಡಿಸುವುದು ನಿಮ್ಮ ಜವಾಬ್ದಾರಿ. ಮದ್ಯವರ್ಜನ ಶಿಬಿರ ಕನ್ನಡಿ ಹಿಡಿಯುವ ಕೆಲಸವನ್ನು ಮಾಡಿದೆ. ನಿಮ್ಮನ್ನು ನೀವು ತಿದ್ದಿಕೊಳ್ಳಿ ಎಂದರು.

ನಿರ್ದೇಶಕ ವಿವೇಕ್‌ ವಿ. ಪಾçಸ್‌, ಯೋಜನಾ ಧಿಕಾರಿ ಪಿ. ಚೆನ್ನಪ್ಪ ಗೌಡ, ಶಿಬಿರಾಧಿ ಕಾರಿ ದೇವಿಪ್ರಸಾದ್‌, ಆರೋಗ್ಯ ಸಹಾಯಕಿ ಜಯಲಕ್ಷ್ಮೀ ಉಪಸ್ಥಿತರಿದ್ದರು.
ಮುಂದಿನ ಶಿಬಿರ ನ. 4ರಂದು ಜರಗ ಲಿದೆ ಎಂದು ವೇದಿಕೆ ಪ್ರಕಟನೆ ತಿಳಿಸಿದೆ.

ಒಳ್ಳೆಯ ಬದುಕು
ದುರಭ್ಯಾಸಗಳು ವ್ಯಕ್ತಿಯಲ್ಲಿ ಸ್ವಾರ್ಥವನ್ನು ಬೆಳೆಸುತ್ತವೆ. ವ್ಯಕ್ತಿ ತನ್ನ ದುಶ್ಚಟದಿಂದ ವ್ಯಕ್ತಿತ್ವ, ಸಂಸಾರ, ಸ್ಥಾನಮಾನವನ್ನು ನಾಶ ಮಾಡಿಕೊಳ್ಳುತ್ತಾನೆ. ಒಳ್ಳೆಯ ವ್ಯಕ್ತಿಗಳೊಂದಿಗೆ ಬೆರೆತು ತಮ್ಮ ಹಾಳಾದ ಜೀವನವನ್ನು ಬದಲಾಯಿಸಿಕೊಂಡು ಮೂಲ ಸ್ವರೂಪವನ್ನು ಹುಡುಕಿ ಒಳ್ಳೆ ಜೀವನವನ್ನು ನಡೆಸಬೇಕು
ಡಾ| ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧರ್ಮಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next