Advertisement
ಕೃಷಿ ಮಾರಾಟ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಮಂಡಳಿ ಸರ್ವ ಸದಸ್ಯರ ಸಭೆ ಬಳಿಕ ಮಾತನಾಡಿದ ಅವರು, ಕೃಷಿ ಮಾರಾಟ ಮಂಡಳಿಯಲ್ಲಿ 2,289 ಖಾಲಿ ಹುದ್ದೆಗಳಿದ್ದು ಅವುಗಳಲ್ಲಿ ಶೀಘ್ರವಾಗಿ 839 ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಕೊಡುವ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಎಪಿಎಂಸಿ ಸದಸ್ಯರ ಗೌರವ ಧನವನ್ನು ಹೆಚ್ಚಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಎಲ್ಲ ಎಪಿಎಂಸಿಗಳನ್ನ ಕಾಗದ ರಹಿತ(ಇ-ಆಡಳಿತ) ಆಡಳಿತ ನಡೆಸುವ ಬಗ್ಗೆ ಚರ್ಚಿಸಲಾಯಿತು. ಜತೆಗೆ ಪ್ರತಿ 3 ತಿಂಗಳುಗಳಿಗೊಮ್ಮೆ ಸರ್ವಸದಸ್ಯರ ಸಭೆ ಕರೆದು, ಕಾಲ ಕಾಲಕ್ಕೆ ರೈತರ ಸಮಸ್ಯೆಗಳನ್ನು ಚರ್ಚಿಸಲಾಗುತ್ತದೆ ಎಂದು ಹೇಳಿದರು.