ಮುಂಬೈ: ಮಹಾರಾಷ್ಟ್ರದ ಪುಣೆಯಿಂದ ಕೊಲ್ಹಾಪುರಕ್ಕೆ ವರ್ಗಾವಣೆಯಾಗಿದ್ದ ನಾನಾ ಸಾಹೇಬ್ (59) ಎಂಬ ಅರಣ್ಯಾಧಿಕಾರಿಯೊಬ್ಬರು ಸುಮಾರು 294 ಕಿ.ಮೀ.ಗಳನ್ನು ಸೈಕಲ್ ಮೂಲಕವೇ ಕ್ರಮಿಸಿ ಕೊಲ್ಹಾಪುರದಲ್ಲಿ ಶುಕ್ರವಾರ ತಮ್ಮ ಕರ್ತವ್ಯಕ್ಕೆ ಹಾಜರಾಗುವ ಮೂಲಕ ತಮ್ಮ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ.
ಬೇಸಗೆ ಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ಪುಣೆ ಮತ್ತು ಕೊಲ್ಹಾಪುರದ ನಡುವಿನ ಹಾದಿಯಲ್ಲಿನ ದುರ್ಗಮ ಬೆಟ್ಟಗುಡ್ಡಗಳ ಏರಿಳಿತದ, ಪ್ರಯಾಸಕರ ರಸ್ತೆಯಲ್ಲಿ ಸೈಕಲ್ ತುಳಿದು ಬಂದೇ ಅವರು ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿರುವುದು ಪರಿಸರ ಸಂರಕ್ಷಣೆಯ ಬಗ್ಗೆ ಅವರ ಹೊಂದಿರುವ ಬದ್ಧತೆಯನ್ನು ಎತ್ತಿ ತೋರಿಸಿದೆ.
ಇದನ್ನೂ ಓದಿ:ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಅಪಾರ ಹಾನಿ
“ಪುಣೆಯಿಂದ ಕೊಲ್ಹಾಪುರಕ್ಕೆ ತಲುಪಲು ಅವರು 17 ಗಂಟೆಗಳನ್ನು ತೆಗೆದುಕೊಂಡಿದ್ದು ಅದರಲ್ಲಿ 12 ಗಂಟೆ ಸೈಕ್ಲಿಂಗ್‌ಗಾಗಿ ವ್ಯಯ ಮಾಡಿದ್ದೇನೆ. ಹಾಗೂ ಉಳಿದ ಅವಧಿಯು ವಿಶ್ರಾಂತಿ, ಊಟ- ತಿಂಡಿಗಾಗಿ ವ್ಯಯವಾಗಿದೆ” ಎಂದು ಅವರು ತಿಳಿಸಿದ್ದಾರೆ.