ನೋಡಲ್ ಅಧಿಕಾರಿ ಮೇಲೆ ಜಿಪಂ ಉಪಾಧ್ಯಕ್ಷರು ಲಂಚ ಪಡೆದ ಆರೋಪ ಮಾಡಿದ್ದಾರೆ. ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಎ.ಕೆ. ಚಲವಾದಿ ಎಂಬ ದಲಿತ ಮಹಿಳೆಯ ಮೇಲೂ ಇದೇ ರೀತಿ ಆಪಾದನೆ ಮಾಡಿ ವರ್ಗಾವಣೆ ಮಾಡಲಾಯಿತು. ಇಂದು ಪರಶುರಾಮ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ತಾಪಂನಲ್ಲಿ ದಲಿತ ನೌಕರರ ಮೇಲೆ ಆರೋಪ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದ್ದಾರೆ. ಕಚೇರಿಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದವರ ಮನವೊಲಿಕೆಗೆ ಪೊಲೀಸ್ ಅಧಿಕಾರಿಗಳು ಮುಂದಾದರು. ಆದರೆ ಪೊಲೀಸರ ಮಾತಿಗೆ ಬಗ್ಗದ ಪ್ರತಿಭಟನಾಕಾರರು ದಲಿತ ನೌಕರರ ವಿರುದ್ಧ ಆರೋಪ ಮಾಡಿರುವ ಜನ ಪ್ರತಿನಿಧಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುವುದಾಗಿ ಪಟ್ಟು ಹಿಡಿದರು. ಪ್ರತಿಭಟನಾಕಾರರು ಶುಕ್ರವಾರ ಸಂಜೆ 4:30ಕ್ಕೆ ಏಕಾಏಕಿ ಕಚೇರಿಯ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದ ಕಾರಣ ದಿನನಿತ್ಯ ತಾಪಂ ಸಿಬ್ಬಂದಿಗಳು ಸಂಜೆ ಮನೆಗೆ ತೆರಳುವ ನೌಕರರು ಪರದಾಡಿದ್ದು ಕಂಡು ಬಂತು.
Advertisement