ಬೆಂಗಳೂರು: ಯಾವುದೇ ವರ್ಗಾವಣೆ ಕಡತ ಮಂಡಿಸದಂತೆ ಸಿಎಂ ಬಸವರಾಜ ಬೊಮ್ಮಾಯಿ ಕಟ್ಟಾಜ್ಞೆ ಹೊರಡಿಸಿ ಒಂದು ದಿನ ಕಳೆಯುವಷ್ಟರಲ್ಲೇ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ವಸತಿ ಇಲಾಖೆ ಕಾರ್ಯದರ್ಶಿಯಾಗಿದ್ದ ಡಾ.ರವಿಶಂಕರ್ ಅವರನ್ನು ಬೆಂಗಳೂರು ವಿಭಾಗದ ಅಬಕಾರಿ ಆಯುಕ್ತರಾಗಿ, ಬಿಬಿಎಂಪಿ ವಿಶೇಷ ಆಯುಕ್ತ ಡಾ.ರಾಮ ಪ್ರಶಾಂತ್ ಮನೋಹರ್ ಅವರನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ, ನಗರಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ಗೆಹೊÉàಟ್ ಅವರನ್ನು ಬಿಬಿಎಂಪಿ ವಿಶೇಷ ಆಯುಕ್ತ ಹುದ್ದೆಗೆ ವರ್ಗಾಯಿಸಲಾಗಿದೆ.
ಅದೇ ರೀತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪಕಾರ್ಯದರ್ಶಿ ಎಲ್.ಶಿವಶಂಕರ್ ನಾಯಕ್ ಅವರನ್ನು ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.