Advertisement
ಎ ಆರ್ ಶಿವು ಶಿವು: ಜನಪರ ಮತ್ತು ದಕ್ಷ ಅಧಿಕಾರಿಗಳನ್ನು ಕೆಲಸವಿಲ್ಲದೇ ಕೂರಿಸುವುದು ಮತ್ತು ಅಂತಹ ಜಾಗಕ್ಕೆ ವರ್ಗಾಯಿಸುವುದರಿಂದ ಯಾರಿಗೂ ಪ್ರಯೋಜನವಿಲ್ಲ.
Related Articles
Advertisement
ಪೂರ್ಣಪ್ರಜ್ಞ ಪಿ ಎಸ್ ; ಇದು ನಿಜಕ್ಕೂ ಖೇದಕರ ಸಂಗತಿ, ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಮತ್ತು ಅವರ ವರ್ಗಾವಣೆ ಮೇಲಿನ ಹಿಡಿತ ಯಾವುದೇ ಶಾಸಕ ಅಥವ ಯಾವುದೇ ಪಕ್ಷಕ್ಕೆ ನೀಡಬಾರದು, ಸರ್ವಪಕ್ಷ ದ ಸದಸ್ಯರನ್ನು ಒಳಗೊಂಡ ಒಂದು ವಿಭಾಗದಿಂದ ಈ ಕಾರ್ಯ ನಿರ್ವಹಿಸುವ ಹೊಣೆ ಇರಬೇಕು. ಪಕ್ಷಗಳು ಅಧಿಕಾರದ ಲಾಲಸೆಗಾಗಿ ಇಂತಹ ಪದೇಪದೇ ವರ್ಗಾವಣೆ ಮಾಡಿದರೆ, ಆಡಳಿತಾತ್ಮಕ ವಿಷಯಕ್ಕೂ ಹಾಗೂ ವರ್ಗಾವಣೆಗೆ ಒಳಪಡುವ ದಕ್ಷ ಅಧಿಕಾರಿಗಳ ಮಾನಸಿಕ, ಕೌಟುಂಬಿಕ, ಮುಖ್ಯವಾಗಿ ನೌಕರರ ಮಕ್ಕಳ ಶಿಕ್ಷಣಕ್ಕೆ ಪದೇ- ಪದೇ ಶಾಲೆ ಬದಲಾವಣೆ ಯಂತಹ ತೊಂದರೆ ಉಂಟಾಗುತ್ತದೆ.
ಗಂಗಾಧರ್ ಎಂ ಎಸ್ ಕೆ: ಯಾವ ಅಧಿಕಾರಿಗಳು ಪ್ರಾಮಾಣಿಕರು? ಪ್ರಾಮಾಣಿಕರು ಒಂದೋ ಕೊಲೆಯಾದರು ಇಲ್ಲಾಂದ್ರೆ ಸ್ವಯಂ ನಿವೃತ್ತಿ ಪಡೆದರು. ಇಲ್ಲದಿದ್ರೆ ಕೆಲಸವಿಲ್ಲದೇ ಡಿಪಾರ್ಟ್ಮೆಂಟ್ ಗೆ ವರ್ಗಾವಣೆ ಆಗುತ್ತಾರೆ. ಲೆಕ್ಕದ ಕೆಲವರು ಇದ್ದಾರೆ. ಉಳಿದವರು ಮತ್ತೊಬ್ಬರಿಗೆ ಬಕೆಟ್ ಹಿಡಿಯುವವವರೇ
ವಿನಯ್ ಸಿ ಜಿ: ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರೋದು ಭ್ರಷ್ಟ ಅಧಿಕಾರಿಗಳನ್ನು ರಾಜಕಾರಿಣಿಗಳ ಅವಶ್ಯಕತೆಗೆ ಅನುಸಾರ ಕೆಲಸ ಮಾಡುವವರನ್ನು ರಾಜಕಾರಿಣಿಗಳಿಗೆ ಬೇಕಾದ ಹಾಗೆ ಉಪಯೋಗಿಸೋದಿಕ್ಕೆ ಬ್ರಷ್ಟರನ್ನ ಆ ಜಾಗಕ್ಕೆ ಕೂರಿಸೋದಿಕ್ಕೆ, ಪ್ರಾಮಾಣಿಕ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟೇ ಇದ್ದಾರೆ ಹೊರತು ಎಲ್ಲರೂ ಪ್ರಾಮಾಣಿಕರಲ್ಲ.