Advertisement

Officers ವರ್ಗಾವಣೆಯೇ ಸರಕಾರದ ಸಾಧನೆ: ಶ್ರೀರಾಮುಲು ವ್ಯಂಗ್ಯ

11:21 PM Sep 01, 2023 | Team Udayavani |

ಬೀದರ್‌: ವಿಧಾನಸೌಧದ ಮೂರನೇ ಮಹಡಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಧಿಕಾರಿಗಳ ವರ್ಗಾವಣೆಯೇ ಕಾಂಗ್ರೆಸ್‌ ಸರಕಾರದ ನೂರು ದಿನಗಳ ಸಾಧನೆಯಾಗಿದ್ದು, 50 ಪರ್ಸಂಟೇಜ್‌ ಹಣ ಕೊಡದಿದ್ದರೆ ಯಾರಿಗೂ ಎನ್‌ಒಸಿ ಕೊಡುತ್ತಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮಲು ಆರೋಪಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಮ್ಮ ಸರಕಾರದ ಯೋಜನೆಗಳು ಮತ್ತು ಸರಕಾರಕ್ಕೆ ನೂರು ದಿನಗಳ ಪೂರೈಕೆ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಕೇವಲ ಪ್ರಧಾನಿ ಮೋದಿ ಅವರಿಗೆ ಟೀಕಿಸುವುದಷ್ಟೇ ಅವರ ಕೆಲಸವಾಗಿದೆ. ಕಾಂಗ್ರೆಸ್‌ನಲ್ಲಿ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂಥ ಪರಿಸ್ಥಿತಿ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಸಚಿವರ ನಡುವೆ ಹೊಂದಾಣಿಕೆಯೇ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ಯಾವೊಬ್ಬ ಶಾಸಕರಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಬಿಜೆಪಿ ಘೋಷಣೆ ಮಾಡಿರುವ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದೆ. ಎಂದು ಆರೋಪಿಸಿದರು.

ಕೆಲವರಿಗೆ ಮಾತ್ರ ಬಿಟ್ಟಿಭಾಗ್ಯಗಳು
ರಾಜ್ಯ ಸರಕಾರದ ಬಿಟ್ಟಿ ಭಾಗ್ಯಗಳು ಬಹಳ ದಿನಗಳವರೆಗೆ ಮುಂದುವರಿಯಲ್ಲ. ಪಂಚ ಗ್ಯಾರಂಟಿಗಳು ರಾಜ್ಯದ ಎಲ್ಲ ಜನತೆಗೆ ಸಿಗುತ್ತಿಲ್ಲ, ಕೆಲವರಿಗಷ್ಟೇ ಮಾತ್ರ ಉಪಯೋಗವಾಗುತ್ತಿದೆ ಎಂದು ಕಲಬುರಗಿಯಲ್ಲಿ ಶ್ರೀರಾಮುಲು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next