ಬೆಂಗಳೂರು: ರಾಜ್ಯ ಸರಕಾರ ಆಡಳಿತ ಯಂತ್ರದಲ್ಲಿ ಭಾರೀ ಬದಲಾವಣೆ ಮಾಡಿದ್ದು, 27 ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ನೇಮಕ ಮಾಡಲಾಗಿದೆ.
ಸಾರ್ವಜನಿಕ ಉದ್ಯಮ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಬಿ.ಎಚ್.ಅನಿಲ್‌ಕುಮಾರ್ ಅವರಿಗೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾ ಗಿದೆ. ಕಪಿಲ್ ಮೋಹನ್- ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ತೂಕ ಮತ್ತು ಅಳತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉಮಾಶಂಕರ-ಪ್ರ.ಕಾರ್ಯದರ್ಶಿ, ಸಹಕಾರ ಇಲಾಖೆ, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಕಾರ್ಯದರ್ಶಿ ಡಾ| ಸೆಲ್ವಕುಮಾರ್‌ಗೆ ಹೆಚ್ಚುವರಿಯಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.
ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತ ನವೀನ್‌ರಾಜ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜವಾಬ್ದಾರಿ, ಅಬಕಾರಿ ಇಲಾಖೆ ಆಯುಕ್ತ ಡಾ| ಜೆ. ರವಿಶಂಕರ ಅವರಿಗೆ ಹೆಚ್ಚುವರಿಯಾಗಿ ವಸತಿ ಇಲಾಖೆ ಕಾರ್ಯದರ್ಶಿ ಜವಾಬ್ದಾರಿ ವಹಿಸಲಾಗಿದೆ. ಡಿ. ರಣದೀಪ್-ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಷ್ ಸೇವೆ, ಕೆ.ವಿ. ತ್ರಿಲೋಕಚಂದ್ರ- ವಿಶೇಷ ಆಯುಕ್ತರು (ಆರೋಗ್ಯ ಮತ್ತು ಐಟಿ) ಬಿಬಿಎಂಪಿ, ಕೆ.ಪಿ. ಮೋಹನರಾಜ್, ಎಂಡಿ, ಕರ್ನಾಟಕ ರಾಜ್ಯ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಬಿ.ಬಿ. ಕಾವೇರಿ, ಎಂಡಿ, ಕರ್ನಾಟಕ ರಾಜ್ಯ ಖನಿಜ ನಿಗಮ, ರೇಷ್ಮೆ ಉದ್ಯಮಗಳ ನಿಗಮದ ಎಂಡಿ ಟಿ.ಎಚ್.ಎಂ. ಕುಮಾರ್ ಅವರಿಗೆ ಹೆಚ್ಚುವರಿ ಯಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರ ಜವಾಬ್ದಾರಿ ವಹಿಸಲಾಗಿದೆ.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್-ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಇಲಾಖೆ, ಎಂ. ಕನಗವಲ್ಲಿ-ನಿರ್ದೇಶಕರು, ಮಕ್ಕಳ ಸಮಗ್ರ ರಕ್ಷಣ ಯೋಜನೆ, ವಿ. ರಾಮಪ್ರಸಾದ್ ಮನೋಹರ್-ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಆರ್. ವೆಂಕಟೇಶ ಕುಮಾರ್- ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಚಾರುಲತಾ ಸೋಮಲ್ ಜಿಲ್ಲಾಧಿಕಾರಿ-ರಾಯಚೂರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕಿ ಶಿಲ್ಪಾನಾಗ್ ಅವರಿಗೆ ಹೆಚ್ಚುವರಿಯಾಗಿ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರ ಹುದ್ದೆ ಜವಾಬ್ದಾರಿ ವಹಿಸಲಾಗಿದೆ.
ಇದನ್ನೂ ಓದಿ:ಹಣ ಕಂಡ್ರೆ ಬಾಯಿಬಿಡುವ ಕಿಮ್! ಬಿಬಿಸಿ ಸಂದರ್ಶನದಲ್ಲಿ ಸೇನಾ ಕಮಾಂಡರ್ ಮಾಹಿತಿ
ಡಾ| ಬಿ.ಸಿ. ಸತೀಶ್- ಜಿಲ್ಲಾಧಿಕಾರಿ, ಕೊಡಗು, ಡಾ| ಎಚ್.ಎನ್.ಗೋಪಾಲ-ಆಯುಕ್ತರು, ಯುವಜನ ಮತ್ತು ಕ್ರೀಡಾ ಇಲಾಖೆ, ಶಿವಾನಂದ ಕಾಪಸಿ-ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ, ಎಂ.ಎಸ್. ಅರ್ಚನಾ-ನಿರ್ದೇಶಕರು-ಪೌರಾಡಳಿತ ಇಲಾಖೆ, ಕೆ.ಎಂ. ಗಾಯತ್ರಿ-ಸಿಇಒ, ಚಾಮರಾಜನಗರ, ಡಾ| ಕೆ.ಎಂ. ಅನುರಾಧಾ-ನಿರ್ದೇಶಕರು, ರೇಷ್ಮೆ ಮಾರುಕಟ್ಟೆ ಮಂಡಳಿ, ಎನ್.ಎಂ. ನಾಗರಾಜ- ರಿಜಿಸ್ಟ್ರಾರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ವರ್ಗಾಯಿಸಲಾಗಿದೆ.