Advertisement
ಕೆಲವು ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸೇರಿ 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾ ಗಿದೆ. ಈಮೂಲಕ ಹೊಸ ಸರ್ಕಾರ ಆಡಳಿತ ಯಂತ್ರಕ್ಕೆ ಹೊಸ ರೂಪ ನೀಡುವ ಪ್ರಯತ್ನಕ್ಕೆ ಕೈಹಾಕಿದೆ. ಪ್ರಮುಖವಾಗಿ ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಪೌರಾಡಳಿತ ಮತ್ತು ನಗರ ಸ್ಥಳೀಯ ಸಂಸ್ಥೆಗಳು) ಕಾರ್ಯದರ್ಶಿ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಮುಂತಾದ ಹುದ್ದೆಗಳಲ್ಲಿ ಬದಲಾವಣೆ ತರಲಾಗಿದೆ.
ಜಾವೇದ್ ಅಖ್ತರ್- ಪ್ರಧಾನ ಕಾರ್ಯದರ್ಶಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೆಪಿಸಿಎಲ್ ಎಂಡಿ ಹೆಚ್ಚುವರಿ; ಡಾ.ಎನ್ .ನಾಗಾಂಬಿಕಾ ದೇವಿ- ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ; ಎಲ್.ಕೆ.ಅತೀಕ್- ಪ್ರಧಾನ ಕಾರ್ಯದರ್ಶಿ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್; ಅಂಜುಂ ಪರ್ವೇಜ್- ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ; ನವೀನ್‌ರಾಜ್ ಸಿಂಗ್- ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಮಿನರಲ್ಸ್;ಸುಭೋದ್ ಯಾದವ್- ಕಾರ್ಯದರ್ಶಿ,ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕಲಬುರಗಿ ವಿಭಾಗೀಯ ಆಯುಕ್ತರು.
Related Articles
ಮತ್ತು ನಗರ ಸ್ಥಳೀಯ ಸಂಸ್ಥೆಗಳು) ಹಾಗೂ ಹೆಚ್ಚುವರಿಯಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆ; ಪಿ.ಸಿ.ಜಾಫರ್- ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ; ಗುಂಜಾನ್ ಕೃಷ್ಣ- ವ್ಯವಸ್ಥಾಪಕ ನಿರ್ದೇಶಕರು,ಕೆಎಸ್‌ಐಐಡಿಸಿಎಲ್; ಡಿ.ರಣ್‌ದೀಪ್-ಹೆಚ್ಚುವರಿ ಆಯುಕ್ತರು (ಆಡಳಿತ), ಬಿಬಿಎಂಪಿ;ವಿ.ಪಿ.ಇಕ್ಕೇರಿ- ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ.
Advertisement
ಎಂ.ದೀಪಾ- ಜಿಲ್ಲಾಧಿಕಾರಿ, ಧಾರವಾಡ; ಸುಷ್ಮಾ ಗೋಡುಬೋಲೆ- ವಿಶೇಷ ಜಿಲ್ಲಾಧಿಕಾರಿ-1, ಬೆಂಗಳೂರು ನಗರ; ಡಾ.ಎಸ್ .ಬಿ.ಬೊಮ್ಮನಹಳ್ಳಿ- ಪ್ರಧಾನ ವ್ಯವಸ್ಥಾಪಕರು (ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ನಿರ್ಮಾಣ), ಕೃಷ್ಣಾ ಮೇಲ್ದಂಡೆ ಯೋಜನೆ; ಡಾ.ಬಿ.ಆರ್.ಮಮತಾ- ಮಿಷನ್ ಡೈರೆಕ್ಟರ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್; ನಳಿನಿ ಅತುಲ್- ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ,ರಾಯಚೂರು; ಶಿಲ್ಪಾ ಶರ್ಮಾ- ಉಪ ವಿಭಾಗಾಧಿಕಾರಿ, ರಾಯಚೂರು ಉಪವಿಭಾಗ; ಎಂ.ಆರ್.ರವಿಕುಮಾರ್- ಆಯುಕ್ತರು,
ಮೈಸೂರು ನಗರಪಾಲಿಕೆ; ಕೆ.ಎಂ.ಜಾನಕಿ-ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮ.