Advertisement

ವರ್ಗಾವಣೆ ಕಾನೂನಿಗೆ ಕೆಲ ತಿದ್ದುಪಡಿ ಅಗತ್ಯ

11:25 PM Sep 09, 2019 | Lakshmi GovindaRaju |

ರಾಮನಗರ: ಶಿಕ್ಷಣ ಇಲಾಖೆ ವರ್ಗಾವಣೆ ಕಾನೂನಿ ನಲ್ಲಿ ಅಗತ್ಯ ತಿದ್ದುಪಡಿ ತರುವುದಾಗಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯ ಪಟ್ಟರು. ತಾಲೂಕಿನ ಕೈಲಾಂಚ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಕಡ್ಡಾಯ ವರ್ಗಾವಣೆಯಡಿ ವರ್ಗಾವಣೆ ಆಗಿರುವ ಕೆಲವು ಶಿಕ್ಷಕರ ಮನವಿಗೆ ಪ್ರತಿಕ್ರಿಯಿಸಿದರು.

Advertisement

ಶಿಕ್ಷಕಿಯೊಬ್ಬರು ತಮಗೆ ಬುದ್ಧಿಮಾಂದ್ಯ ಮಗಳಿದ್ದು ತಾವು ಹಾಲಿ ಕಾರ್ಯನಿರ್ವಹಿಸುತ್ತಿರುವ ಘಟಕದಲ್ಲೇ ಬಿ ಅಥವಾ ಸಿ ವಲಯದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಪ್ರಾರ್ಥಿಸಿದರು. ಶಿಕ್ಷಕಿಯ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಕ್ಯಾನ್ಸರ್‌, ಹೃದಯ ಸಂಬಂಧಿ ಖಾಯಿಲೆ ಸೇರಿದಂತೆ 5 ಖಾಯಿಲೆಗಳು ಇದ್ದರೆ ಮಾತ್ರ ಪರಿಗಣಿಸಲು ಅವಕಾಶವಿದೆ.

ಆದರೆ ಬುದ್ಧಿಮಾಂದ್ಯ, ಸಿಜೋಫೆರ್ನಿಯಾ, ಬೈಪೋಲಾರ್‌ ಮುಂತಾದ ಖಾಯಿಲೆಗಳನ್ನು ವರ್ಗಾವಣೆ ಕಾನೂನಿಯಲ್ಲಿ ದಾಖಲಿಸಲಾಗಿಲ್ಲ. ಹೀಗಾಗಿ ಅಂತಹ ಪ್ರಕರಣಗಳಿಗೆ ತಾವು ಅಸಹಾಯಕ ರಾಗಿರುವುದಾಗಿ ತಿಳಿಸಿದರು. ಸದ್ಯದಲ್ಲಿ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಇನ್ನಷ್ಟು ಗಂಭೀರ ಕಾಯಿಲೆಗಳನ್ನು ಸೇರಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next