ಮಾಗಡಿ: ಅನಧಿಕೃತ ಪಂಪ್‌ಸೆಟ್ ಗುರುತಿಸಿ ಪಟ್ಟಿ ನೀಡಬೇಕು. ಎಚ್‌ವಿಡಿಎಸ್ ಯೋಜನೆಯಡಿ ರೈತರಿಗೆ ವಿದ್ಯುತ್ ಪರಿವರ್ತಕ(ಟೀಸಿ) ಅಳವಡಿಸಲು ಕೆಪಿಟಿಸಿಎಲ್ ಅಗತ್ಯ ಕ್ರಮಕೈಗೊಳ್ಳಬೇಕು. ಎಂಜಿನಿಯರ್‌ಗಳು ಸ್ಪಂದಿಸುತ್ತಿಲ್ಲ ಎಂಬ ದೂರು ಬಂದರೆ ಎತ್ತಂಗಡಿ ಮಾಡಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಕೆಪಿಟಿಸಿಎಲ್ ಎಂಜಿನಿ ಯರ್ ಹಾಗೂ ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ಅನಧಿಕೃತ ಪಂಪ್ ಸೆಟ್‌ಗಳನ್ನು ಗುರುತಿಸಿ ನನಗೆ ಪಟ್ಟಿ ನೀಡಿ. ಈಗಾಗಲೇ ಸಾಲ ಮಾಡಿ, ರೈತರು ಕೊಳವೆ ಬಾವಿ ಕೊರೆಸಿಕೊಂಡು ವಿದ್ಯುತ್ ಸಂಪರ್ಕಕ್ಕಾಗಿ ಹಣ ಪಾವ ತಿಸಿ ವರ್ಷ ಕಳೆದರೂ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂಬ ಆರೋಪಗಳಿದೆ ಎಂದು ಎಚ್ಚರಿಕೆ ನೀಡಿದರು. ಬೆಸ್ಕಾಂಗೆ ಹಣ ಪಾವತಿಸಿ ಟೀಸಿಗಾಗಿ ಕಾಯುತ್ತಿರುವ ರೈತರಿಗೆ ಶೀಘ್ರ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬಜೆಟ್‌ನಲ್ಲಿ ಹಣ ಮಂಜೂರಾಗಿಲ್ಲ ಎಂದು ರೈತರನ್ನು ಅಲೆ ದಾಡಿಸಬೇಡಿ.
ತಿಪ್ಪಸಂದ್ರ ಎಇ ಯಾರಿಗೂ ಸಿಗುತ್ತಿಲ್ಲ, ಮೊಬೈಲ್ ಕರೆ ಸ್ವಿಕರಿಸುತ್ತಿಲ್ಲ, ಕುದೂರು ಎಂಜಿನಿಯರ್ ವಿರುದ್ಧ ದೂರು ಗಳಿದೆ. ಸಮರೋಪಾದಿಯಲ್ಲಿ ಕೆಲಸ ಮಾಡದಿ ದ್ದರೆ ಶಿಸ್ತಿನ ಕ್ರಮ ಜರುಗಿಸುವಂತೆ ಕೆಪಿಟಿಸಿಎಲ್ ಅಭಿಯಂತರ ಕಾರ್ಯನಿರ್ವಾಹಕ ಎಂಜಿನಿಯರ್ ಚಿಕ್ಕೇಗೌಡ ಅವರಿಗೆ ತಾಕೀತು ಮಾಡಿದರು. ತಾಲೂಕಿನಲ್ಲಿ 1,100 ಐಪಿ ಸೆಟ್‌ಗಳಿವೆ. ಅವುಗಳಲ್ಲಿ ಬಹು ತೇಕ ಅನಧಿಕೃತವಾಗಿವೆ. ಅವುಗಳಿಗೆ ಆರ್‌ಆರ್ ನಂಬರ್ ಪಡೆದಿದ್ದಾರೆ.
ಅದರೂ ಹಣ ಪಾವತಿಸಿ ಅಧಿಕೃತಗೊಳಿಸಿಕೊಳ್ಳಲು ಮುಂದೆ ಬರುವುದಿಲ್ಲ ಎಂದು ಕೆಪಿಟಿಸಿಎಲ್ ಇಇ ಚಿಕ್ಕೇಗೌಡ ಶಾಸಕರ ಗಮನಕ್ಕೆ ತಂದರು. ಆಗ ರೈತರ ಪರವಾಗಿ ಟಿ.ಜಿ.ವೆಂಕಟೇಶ್ ಮಾತನಾಡಿ, ಅಧಿಕೃತ ಮಾಡಿಕೊಳ್ಳಲು ರೈತರು ಆರ್‌ಆರ್ ನಂಬರ್ ಪಡೆದು ವರ್ಷಗಳೇ ಕಳೆದಿವೆ. ಆದರೂ ಎಂಜಿನಿಯರ್‌ಗಳು ರೈತರಿಗೆ ಸ್ಪಂದಿಸುತ್ತಿಲ್ಲ. ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.
ರೈತರ ತಮ್ಮ ಪಂಪ್‌ಸೆಟ್‌ಗಳಿಗೆ ಟೀಸಿಗಾಗಿ ವರ್ಷಗಟ್ಟಲೇ ಕಾದರೂ ರೈತರಿಗೆ ಟೀಸಿ ಅಳವಡಿಸಲು ಬೆಸ್ಕಾಂ ಎಂಜಿನಿಯರ್ ಗಳು ಮುಂದಾಗುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು. ವಿದ್ಯುತ್ ಸಮಸ್ಯೆಗಳ ನಿವಾರಣೆಗೆ ಶಾಸಕ ಎ.ಮಂಜುನಾಥ್ ಮತ್ತು ಎಂಜಿನಿಯರ್‌ಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ ದರು. ಇಲಾಖೆಯ ಆಂತರಿಕ ಸಮಸ್ಯೆಗಳ ಬಗ್ಗೆಯೂ ದೂರುಗಳಿವೆ. ಎಲ್ಲವನ್ನು ಎಂಜಿನಿಯರ್‌ಗಳು ಬಗೆಹರಿಸಿಕೊಳ್ಳಬೇಕು.
ನಿಮ್ಮ ಅಂತರಿಕ ಸಮಸ್ಯೆಗಳನ್ನು ರೈತರ ಮೇಲೆ ಹಾಕಬೇಡಿ. ರೈತ ರಿಗೆ ಅನ್ಯಾಯವಾದರೆ ಸುಮ್ಮನೆ ಕೂರುವುದಿಲ್ಲ ಎತ್ತಂಗಡಿ ಮಾಡಿಸುತ್ತೇನೆ ಎಂದು ಎಚ್ಚರಿಸಿದರು. ಮುಖಂಡರಾದ ತಮ್ಮಣ್ಣಗೌಡ, ಚಿಕ್ಕಕಲ್ಯಾ ರಮೇಶ್, ತಿರಮಲೆ ಭೈರಪ್ಪ, ಕೆಪಿಟಿಸಿಎಲ್ ಇಇ ಚಿಕ್ಕೇಗೌಡ, ಎಇಇ ಗಳಾದ ಸುಭಾಷ್‌ಮುತ್ತು, ಸುಧಾಕರನ್, ಠಾಕ್ರಾ ನಾಯಕ್, ಎಇ ಶಿವರಾಜು, ಎಇಟಿ ರವಿ, ಜೆಇ ನರಸಿಂಹಮೂರ್ತಿ, ಜೆಇ ದಿನೇಶ್, ಒಎಸ್ ಹರೀಶ್, ಗುತ್ತಿಗೆದಾರ ಮೂರ್ತಿ, ಪ್ರಕಾಶ್, ಸಿದ್ಧೇಗೌಡ ಇತರರು ಇದ್ದರು.