*ಉಪಯೋಗಿಸದ ಖಾತೆಗೆ ಬಂದು ಬಿದ್ದದ್ದು ದೊಡ್ಡ ಮೊತ್ತ
*ರಾಜಕಾರಣಿಗಳ, ಉದ್ಯಮಿಗಳ ಅಕ್ರಮ ಹಣ ಹರಿವು ಬಹಿರಂಗ
ಕರಾಚಿ: “ನಿಮ್ಮ ಬ್ಯಾಂಕ್ ಖಾತೆಯಲ್ಲಿ 300 ಕೋಟಿ ರೂ. ವ್ಯವಹಾರ ನಡೆದಿದೆ. ತತ್‌ಕ್ಷಣವೇ ಕಚೇರಿಗೆ ಬಂದು ಈ ವ್ಯವಹಾರದ ಬಗ್ಗೆ ನಿಮಗೆ ತಿಳಿದಿರುವ ಮಾಹಿತಿ ಕೊಡಿ’ ಎಂದು ಪಾಕಿಸ್ಥಾನದ ಫೆಡರಲ್ ತನಿಖಾ ಸಂಸ್ಥೆ
(ಎಫ್ಐಎ) ಕಡೆಯಿಂದ ಫೋನ್ ಮೂಲಕ ಸೂಚನೆ ಕೇಳಿದ ಕರಾಚಿಯ ರಿಕ್ಷಾ ಚಾಲಕ ಮೊಹಮ್ಮದ್ ರಶೀದ್‌ಗೆ ದಿಕ್ಕೇ ತೋಚದಂತಾಗಿತ್ತು.
Advertisement
ಎರಡು ಹೊತ್ತಿನ ಊಟಕ್ಕಾಗಿ ದಿನವಿಡೀ ರಿಕ್ಷಾ ಚಲಾಯಿಸುವ ತಾವೆಲ್ಲಿ, 300 ಕೋಟಿ ರೂ. ವ್ಯವಹಾರವೆಲ್ಲಿ ಎಂದಂದುಕೊಂಡು ಭೀತಿಯಿಂದಲೇ ಎಫ್ಐಎ ಕಚೇರಿಗೆ ತೆರಳಿದ್ದರು ಮೊಹಮ್ಮದ್. ಕಚೇರಿಯಲ್ಲಿ ಮೊಹಮ್ಮದ್‌ಗೆ ಅವರ ಬ್ಯಾಂಕ್ ಖಾತೆಯ ದಾಖಲೆ ನೀಡಿದ ಅಧಿಕಾರಿಗಳು ಹಣದ ಮೂಲ ತಿಳಿಸುವಂತೆ ಕೇಳಿದರು. ಅದಕ್ಕೆ ಮೊಹಮ್ಮದ್, ಹಿಂದೆ ತಾವೊಂದು ಕಂಪೆನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಆ ಕಂಪೆನಿಯ ವೇತನಕ್ಕಾಗಿ 2005ರಲ್ಲಿ ಈ ಬ್ಯಾಂಕ್ ಖಾತೆ ತೆರೆದಿದ್ದು, ತಿಂಗಳ ಹಿಂದಷ್ಟೇ ಆ ಕೆಲಸ ಬಿಟ್ಟು ಸ್ವಂತಕ್ಕೆ ಆಟೋ ಓಡಿಸುತ್ತಿದ್ದು ಬ್ಯಾಂಕ್ ಖಾತೆಯ ಉಸಾಬರಿಗೇ ಹೊಗಿಲ್ಲ ಎಂದರು.