ಶ್ರೀನಗರ: ದಕ್ಷಿಣ ಕಾಶ್ಮೀರದ ತ್ರಾಲ್‌ನಲ್ಲಿ ಶನಿವಾರ ರಾತ್ರಿಯಿಂದ ನಡೆಯುತ್ತಿದ್ದ 12 ಗಂಟೆಗಳ ಎನ್‌ಕೌಂಟರ್ ಭಾನುವಾರ ಮುಕ್ತಾಯವಾಗಿದೆ. ಈ ಕಾಳಗದಲ್ಲಿ ಉಗ್ರ ಬುರ್ಹಾನ್ ವಾನಿಯ ಅನುಚರ ಅಕೀಬ್ ಭಟ್ ಹಾಗೂ ಮತ್ತೂಬ್ಬ ಉಗ್ರನನ್ನು ಕೊಲ್ಲಲಾಗಿದೆ. ಅಕೀಬ್ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದವನಾದರೆ, ಮತ್ತೂಬ್ಬ ಉಗ್ರ ಜೈಶ್-ಎ-ಮೊಹಮ್ಮದ್‌ಗೆ ಸೇರಿದವ. ಈ ಕಾಳಗದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಕೂಡಾ ಪ್ರಾಣಾರ್ಪಣೆ ಮಾಡಿಕೊಂಡಿದ್ದಾರೆ. ಗುಂಡಿನ ಚಕಮಕಿ ಕೊನೆಯ ಹಂತಕ್ಕೆ ಬಂದು ಇನ್ನೇನು ಅಸುನೀಗುವುದು ಖಚಿತ ಎಂದು ಗೊತ್ತಾಗುತ್ತಿದ್ದಂತೆಯೇ ಭಟ್ ತಂದೆಗೆ ಫೋನ್ ಮಾಡಿ ವಿದಾಯ ಹೇಳಿದ್ದಾನೆ ಎಂಬ ಅಂಶವನ್ನು ರಕ್ಷಣಾ ಪಡೆಯ ಹಿರಿಯ ಅಧಿಕಾರಿ ಖಚಿತಪಡಿಸಿಕೊಂಡಿದ್ದಾರೆ. ಇಬ್ಬರು ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಮತ್ತು ಸೇನೆಯ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದಿದ್ದವು. ಜತೆಗೆ ಸ್ಥಳೀಯರು ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆಯನ್ನೂ ವಿಧಿಸಲಾಗಿತ್ತು. ವಾನಿ ಸಾವಿನ ಬಳಿಕ ಕಾಶ್ಮೀರದಲ್ಲಿ ದೀರ್ಘ ಕಾಲ ಕರ್ಫ್ಯೂ ಜಾರಿಯಲ್ಲಿತ್ತು.