Advertisement

ಸರಕಾರದ ಆಯಕಟ್ಟಿನ ಜಾಗದಲ್ಲಿ ದೇಶದ್ರೋಹಿಗಳು: ಕೋಟ

11:02 PM Feb 21, 2024 | Team Udayavani |

ಬೆಂಗಳೂರು: ಸರಕಾರದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದಾರೆ. ಕೇಂದ್ರ ಸರಕಾರವನ್ನು ಬಯ್ಯುವುದೇ ಅವರ ಕೆಲಸ. ಅವರು ನೀಡುತ್ತಿರುವ ಅಂಕಿಅಂಶಗಳನ್ನು ಮುಖ್ಯಮಂತ್ರಿಯವರು ಇಲ್ಲಿ ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದರು. ಅದರಂತೆ ಕನ್ಸೂéಮರ್‌ ಕಾನ್ಫಿಡೆನ್ಸ್‌ ಇಂಡೆಕ್ಸ್‌ ಪ್ರಕಾರ ಮಾಸಿಕ 5000ಕ್ಕಿಂತ ಕಡಿಮೆ ವರಮಾನ ಇರುವವರು ಶೇ.61.6 ಜನರಿದ್ದು, ಹಿಂದಿನ ವರ್ಷಗಳಿಗಿಂತ ಈ ಪರಿಸ್ಥಿತಿ ಹಾಳಾಗಿದೆ ಎಂದು ಆರ್‌ಬಿಐ ವರದಿ ಹೇಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯವರ ಹಸಿವಿನ ಸೂಚ್ಯಂಕದಲ್ಲಿ 2023ರಲ್ಲಿ 125 ದೇಶಗಳ ಪಟ್ಟಿಯಲ್ಲಿ ಭಾರತ 115 ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕೋಟ ಶ್ರೀನಿವಾಸ ಪೂಜಾರಿ, ಈ ಎಲ್ಲ ಅಂಕಿ ಅಂಶಗಳು ಕಾಂಗ್ರೆಸ್‌ನದ್ದೂ ಅಲ್ಲ; ಸಿದ್ದರಾಮಯ್ಯ ಅವರದ್ದೂ ಅಲ್ಲ. ಈ ಸರಕಾರದಲ್ಲಿ ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವ ದೇಶದ್ರೋಹಿಗಳದ್ದಾಗಿದೆ. ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುವುದೇ ಅವರ ಕೆಲಸ ಎಂದು ಆರೋಪಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next