Advertisement

ಕಲಬುರಗಿ ವಿಮಾನನಿಲ್ದಾಣದಲ್ಲಿ ತರಬೇತಿ ತಂಡ

02:06 PM Jan 20, 2021 | Team Udayavani |

ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತರಬೇತಿ ಪಡೆಯಲು 15 ಜನರ ತಂಡವೊಂದು ಬಂದಿದೆ. ತರಬೇತಿ ನೀಡಲು ಆರು ನುರಿತ ವಿಮಾನ ಚಾಲಕರು ಹಾಗೂ ತಜ್ಞರು ಬಂದಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್‌ ಯುರಾನ್‌ ಅಕಾಡೆಮಿ (ಐಜಿಆರ್‌ಯುಎ)ಯವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಡೆಸುವ ಪೈಲಟ್‌ ತರಬೇತಿ ಮಂಗಳವಾರದಿಂದ ಆರಂಭವಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ತರಬೇತಿ ಕೇಂದ್ರ ಶುರುವಿಗೆ ಮುನ್ನುಡಿ ಬರೆದಂತಾಗಿದೆ.

Advertisement

ವಾಣಿಜ್ಯ ಪೈಲಟ್‌ಗಳ ಪರವಾನಗಿ ಪಡೆದುಕೊಳ್ಳುವ ಆಕಾಂಕ್ಷಿಗಳಿಗೆ ಪೈಲಟ್‌ ತರಬೇತಿ ನೀಡುವ ದೇಶದ ಪ್ರಮುಖ ಫ್ಲೈಯಿಂಗ್‌ ತರಬೇತಿ ಸಂಸ್ಥೆಯಾಗಿರುವ ಐಜಿಆರ್‌ ಯುಎ ನಾಗರಿಕ ವಿಮಾನಯಾನ ಸಚಿವಾಲಯದ ನಿಯಂತ್ರಣದಲ್ಲಿದೆ. ದೇಶದ ಅತ್ಯುತ್ತಮ ಪೈಲಟ್‌ಗಳು ಈ ಸಂಸ್ಥೆಯಲ್ಲಿಯೇ ಕಲಿತುಕೊಂಡಿರುವುದು ವಿಶೇಷ. ಕಲಬುರಗಿಗೆ ಆಗಮಿಸಿರುವ ವಿಮಾನ ಹಾರಾಟದ ತರಬೇತಿ ತಂಡವು ಬರುವ ಮಾರ್ಚ್‌ 31ರ ವರೆಗೆ ತರಬೇತಿ ಪಡೆಯಲಿದೆ.

ಇದನ್ನೂ ಓದಿ:ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

ಆತ್ಮನಿರ್ಭರ ಭಾರತ ಘೋಷಣೆಯ ದೂರದೃಷ್ಟಿ ಯೋಜನೆ ಭಾಗವಾಗಿ ವಿಮಾನಯಾನ ಸಚಿವಾಲಯವು ಕಲಬುರಗಿಯಲ್ಲಿ ವಿಮಾನಯಾನ ತರಬೇತಿ ಆರಂಭಿಸಿದ್ದು, ಸಂಸದ ಡಾ| ಉಮೇಶ ಜಾಧವ ಮಂಗಳವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ತರಬೇತಿ ನಿರತ ಪೈಲಟ್‌ಗಳಿಗೆ ಶುಭ ಕೋರಿದರು. ತರಬೇತಿ ಮುಖ್ಯಸ್ಥ ಕ್ಯಾಪ್ಟನ್‌ ಕುಂಜನ್‌ ಭಟ್‌, ತರಬೇತುದಾರ ಭರನಾಸಿಂಗ್‌, ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರರಾವ್‌, ತರಬೇತಿ ಸಂಸ್ಥೆ ಆಡಳಿತಾಧಿಕಾರಿ ಗೋಪಾಲರಾವ ಪಿಳ್ಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next