Advertisement
ಜ್ಯೂಡ್ದ್ ತನ್ನ 12ನೇ ವಯಸ್ಸಿನಲ್ಲಿಯೇ ಕಿವ್ಕುಶಿಂ ಕರಾಟೆ ಸಂಸ್ಥಾಪಕ ಮಸುತುಟ್ಸಾ ಅವರ ಗರಡಿಯಲ್ಲಿ ಪಳಗಿದವರು. ಒಂದು ಸಾವಿರ ದಿನಗಳ ಲೈವ್ ಇನ್ ವಿದ್ಯಾರ್ಥಿ ತರಬೇತಿ ಪೂರ್ಣಗೊಂಡ ಇಬ್ಬರು ವಿದೇಶಿಯರ ಪೈಕಿ ಜ್ಯೂಡ್ದ್ ಮೊದಲಿಗರು. ಜ್ಯೂಡ್ದ್ ಅವರು ತಮ್ಮ ವಿದ್ಯಾರ್ಥಿ ವಿನಾಯಕ ಶೆಟ್ಟಿ ಅವರೊಂದಿಗೆ ಸಮರ ಕಲೆಗಳ ಸೆಮಿನಾರ್ ನಡೆಸಲು ಭಾರತಕ್ಕೆ ಬಂದಿದ್ದು, ತಣ್ಣೀರುಬಾವಿಯಲ್ಲಿ ಸುಮಾರು ನೂರು ಮಂದಿಗೆ ಎರಡು ದಿನ ಒಳಾಂಗಣ ಹಾಗೂ ಒಂದು ದಿನದ ಹೊರಾಂಗಣ ತರಬೇತಿ ಕೊಟ್ಟರು. ವಿಶ್ವ ಚಾಂಪಿಯನ್ ಆಗಿರುವ ಜ್ಯೂಡ್ದ್ ಫಿಟ್ನೆಸ್ ಕುರಿತಾಗಿ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ಜ್ಯೂಡ್ದ್ ಅವರು ಮಾತನಾಡಿ, ನಗರ ವಾತಾವರಣ ಫಿಟ್ನೆಸ್ ಗೆ ಹೇಳಿ ಮಾಡಿಸಿದಂತಿದೆ ಎಂದರು. Advertisement
ಜ್ಯೂಡ್ದ್ ರಿದ್ ಅವರಿಂದ ಸಮರಕಲೆ ತರಬೇತಿ
12:33 PM Oct 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.