Advertisement
ಕೊಣಾಜೆಯ ಪಜೀರು ಗ್ರಾಮದ ಕಂಬ್ಳಪದವು ಸಮೀಪದ ಕೆ.ಐ.ಎ.ಡಿ.ಬಿ.ಯ ಸುಮಾರು 10 ಎಕ್ರೆ ಪ್ರದೇಶದಲ್ಲಿ ನೂತನ ತರಬೇತಿ ಕೇಂದ್ರ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯ ಸರಕಾರ 15 ಕೋಟಿ ರೂ. ಮೀಸಲಿಟ್ಟಿದೆ. ಕೆಲವು ವರ್ಷಗಳಿಂದ ಘೋಷಣೆಯಲ್ಲೇ ಉಳಿದಿದ್ದ ಯೋಜನೆ ಈಗ ಮರುಜೀವ ಪಡೆದುಕೊಂಡಿದ್ದು, ಶೀಘ್ರದಲ್ಲಿ ಇದರ ಶಿಲಾನ್ಯಾಸ ನೆರವೇರಲಿದೆ.
Related Articles
ಅರ್ಹ ಮತ್ತು ನಿಪುಣತೆ ಇರುವ ಚಾಲಕರಿಗೆ ನವೀಕೃತ ಚಾಲನಾ ಪರವಾನಿಗೆ ನೀಡುವುದು ಈ ಸಂಸ್ಥೆಯ ಉದ್ದೇಶ. ಘನ ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನ ಚಾಲಕನನ್ನು ಸಂಪೂರ್ಣವಾಗಿ ಸಿದ್ಧಗೊಳಿಸುವ ಹಾಗೂ ಪರೀಕ್ಷೆ ನಡೆಸುವ ಸಂಸ್ಥೆಯಿದು. ಭಾರೀ ವಾಹನಗಳ ಚಾಲನೆಯ ಕುರಿತಂತೆ ಒಂದು/ಎರಡು ಅಥವಾ ಮೂರು ತಿಂಗಳ ತರಬೇತಿ ನೀಡುವ ಯೋಚನೆಯೂ ಇದೆ. ತರಬೇತಿ ಸಂದರ್ಭದಲ್ಲಿ ಊಟ/ ವಸತಿ ವ್ಯವಸ್ಥೆ ಮಾಡಲಾಗುತ್ತದೆ, ಪ್ರತ್ಯೇಕ ಪಠ್ಯಪುಸ್ತಕವೂ ಬರಲಿದೆ. ಚಾಲನೆಯ ನಿಯಮ, ಕಾನೂನು, ವಹಿಸಬೇಕಾದ ಎಚ್ಚರಿಕೆ, ಮೆಕ್ಯಾನಿಕಲ್ ಮಾಹಿತಿ, ವಾಹನಗಳ ನಿರ್ವಹಣೆ ಸಹಿತ ಎಲ್ಲ ಅಂಶಗಳ ಬಗ್ಗೆಯೂ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಮಂಗಳೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ.
Advertisement
ಮುಂದಿನ ದಿನಗಳಲ್ಲಿ ಭಾರೀ ವಾಹನ ಚಾಲನಾ ತರಬೇತಿ ಕಡ್ಡಾಯ ಎಂಬುದು ಮಾಡಬೇಕಿದೆ. ಭಾರೀ ವಾಹನಗಳ ಚಾಲನೆ ಮಾಡುವವರ ಚಾಲನಾ ಪರವಾನಿಗೆ ನವೀಕರಣ ಸಂದರ್ಭ ಇದನ್ನು ಪರಿಗಣಿಸಿಯೇ ನವೀಕರಣಕ್ಕೆ ಅವಕಾಶ ಕೊಡುವ ಮೂಲಕ ನೂತನ ಕೇಂದ್ರವನ್ನು ಗಟ್ಟಿಗೊಳಿಸಲಾಗುವುದು’ ಎಂದರು.
ಶಿಲಾನ್ಯಾಸ ಮುಂದೂಡಿಕೆಭಾರೀ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಡಿ. 8ರಂದು ಬೆಳಗ್ಗೆ 11 ಗಂಟೆಗೆ ಸಾರಿಗೆ ಸಚಿವ ಎಚ್. ಎಂ. ರೇವಣ್ಣ ಅವರು ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ ತುರ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಂಕು ಸ್ಥಾಪನೆಯನ್ನು ಮುಂದೂಡಲಾಗಿದೆ. ಮುಂದಿನ ದಿನವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಜಿ.ಎಸ್. ಹೆಗಡೆ ‘ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ. ತರಬೇತಿ ಕೇಂದ್ರದಲ್ಲಿ ಏನೆಲ್ಲ ಇರಲಿದೆ?
ಕಂಬ್ಳಪದವು ಸಮೀಪದ ಕೆ.ಐ.ಎ.ಡಿ.ಬಿ.ಯ ಸರ್ವೆ ನಂ.330, 331 ಹಾಗೂ 415ರ ಸುಮಾರು 10 ಎಕ್ರೆ ಪ್ರದೇಶದಲ್ಲಿ ಎರಡು ಅಂತಸ್ತುಗಳ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ ನಿರ್ಮಾಣವಾಗಲಿದೆ. ಆಡಳಿತಾತ್ಮಕ ಕಟ್ಟಡ, ವಿಶ್ರಾಂತಿ ಗೃಹ, ಕಾರ್ಯಾಗಾರ ಕಟ್ಟಡ, ಉಪಾಹಾರ ಗೃಹ ಇಲ್ಲಿರಲಿದೆ. ಪರೀಕ್ಷಾ ಪಥದಲ್ಲಿ ‘ಎಸ್’ ಮಾದರಿಯ ಚಾಲನಾ ಪಥ (ಟ್ರಾಫಿಕ್), ರಿವರ್ಸ್ ಟ್ರಾಫಿಕ್, ‘8’ ಆಕಾರದ ಟ್ರಾಫಿಕ್, ಗ್ರಾಡಿಯೆಂಟ್ ಟ್ರಾಫಿಕ್ ನಿರ್ಮಾಣವಾಗಲಿದೆ. ದಿನೇಶ್ ಇರಾ