Advertisement

ಬೀದಿ ಬದಿ ವ್ಯಾಪಾರಿಗೆ ತರಬೇತಿ

05:44 PM Mar 27, 2022 | Team Udayavani |

ಮಾನ್ವಿ: ಪಟ್ಟಣದ ಬೀದಿಗಳಲ್ಲಿ ನೂರಾರು ಬಡ ಜನರು ತಮ್ಮ ನಿತ್ಯದ ಜೀವನ ನಿರ್ವಹಣೆಗಾಗಿ ಸಣ್ಣ ವ್ಯಾಪಾರಗಳನ್ನು ನಡೆಸುತ್ತಿದ್ದು, ಅಂಥವರ ಅಭಿವೃದ್ಧಿಗಾಗಿ ಪುರಸಭೆ ವತಿಯಿಂದ ದೀನ್‌ದಯಾಳ್‌ ಅಂತ್ಯೋದಯ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಅಗತ್ಯ ನೇರವನ್ನು ನೀಡಲಾಗುತ್ತಿದೆ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ ತಿಳಿಸಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ವ್ಯಾಪಾರಿಗಳಿಗೆ ಅಧಿನಿಯಮ ಮತ್ತು ಯೋಜನೆಗಳ ಕುರಿತು ನಡೆದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳ ಜೀವನಮಟ್ಟ ಸುಧಾರಣೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಮುಖ್ಯಾಧಿಕಾರಿ ಗಂಗಾಧರ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಪುರಸಭೆ ಹಾಗೂ ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗಾಗಿ ಅಲ್ಪ ಮೊತ್ತವನ್ನು ವಿವಿಧ ಬ್ಯಾಂಕ್‌ಗಳು ವಿತರಿಸುತ್ತಿದ್ದು, ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿದಲ್ಲಿ ವ್ಯಾಪಾರದ ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ನೆರವನ್ನು ಪಡೆಯಬಹುದು ಎಂದರು.

ಪುರಸಭೆ ಅಧ್ಯಕ್ಷೆ ರಶೀದಾ ಬೇಗಂ, ಸಿಇಒ ಈರಣ್ಣ, ಎ.ಎಸ್‌.ಐ. ಚಕ್ರಪಾಣಿ, ಕಾನೂನು ಸಲಹೆಗಾರರಾದ ಎ.ಬಿ. ಉಪ್ಪಳ ಮಠ, ಆರೋಗ್ಯಾಧಿಕಾರಿ ಶಶಿಧರ, ಕೌಶಲ್ಯಧಿಕಾರಿ ರಸೂಲ್‌ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next