Advertisement

“ಬುಲೆಟ್‌’ಭೀತಿಯಡಿ ಜಪಾನ್‌ನಲ್ಲಿ ತರಬೇತಿ 

06:00 AM Aug 28, 2018 | |

ಟೋಕಿಯೊ: ಜಪಾನ್‌ನ ಪ್ರಮುಖ ಬುಲೆಟ್‌ ರೈಲು ಕಂಪನಿಯಾದ ಶಿಂಕನ್ಸೇನ್‌, ತನ್ನ ಭದ್ರತಾ ಸಿಬ್ಬಂದಿಗೆ ವಿಭಿನ್ನ ತರಬೇತಿಯೊಂದನ್ನು ನೀಡಿ ಸುದ್ದಿಯಾಗಿದೆ. ರೈಲುಗಳು ಸಾಗುವ ಹಳಿಯ ಪಕ್ಕದಲ್ಲೇ ಅವರನ್ನು ನಿಲ್ಲಿಸಿ ಭದ್ರತಾ ವ್ಯವಸ್ಥೆಗಳ ಬಗ್ಗೆ, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ತರಬೇತಿ ನೀಡಿದೆ. ಆದರೆ, ಗಂಟೆಗೆ 300 ಕಿ.ಮೀ. ವೇಗದಲ್ಲಿ ಸಾಗುವ ರೈಲುಗಳಿಂದಾಗಿ ಹಳಿಯ ಪಕ್ಕದಲ್ಲೇ ಇದ್ದ ಸಿಬ್ಬಂದಿ ಅಂಗೈಯ್ಯಲ್ಲಿ ಜೀವ ಹಿಡಿದುಕೊಂಡು ನಿಂತು ತರಬೇತಿ ಪಡೆಯಬೇಕಾಗಿ ಬಂದಿದ್ದು ಕೊಂಚ  ವಿವಾದಕ್ಕೆ ಕಾರಣವಾಗಿದೆ. 

Advertisement

ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಕಂಪನಿ, “”ಇತ್ತೀಚೆಗೆ, ವೇಗವಾಗಿ ಸಾಗುತ್ತಿದ್ದ ರೈಲಿನ ಹೊರಕವಚವೊಂದು ಕಳಚಿ ಬಿದ್ದಿತ್ತು. ಹಾಗಾಗಿ, ಭದ್ರತಾ ಸಿಬ್ಬಂದಿಗೆ ಹಳಿಯ ಮೇಲೆ ರೈಲಿನ ವೇಗ ಹೇಗಿರುತ್ತದೆ, ಅಲ್ಪ ಸ್ವಲ್ಪ ಲೋಪವಾದರೂ ಅದು ಹೇಗೆ ಅಪಾಯಕಾರಿ ಎಂಬುದನ್ನು ಮನದಟ್ಟು ಮಾಡಿ ಕೊಡಲು ಈ ಪ್ರಯತ್ನ ಮಾಡಲಾಗಿದೆ” ಎಂದು ಅವರು ತಿಳಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next