ಮಂಗಳೂರು: ನೇತ್ರಾವತಿ ಕ್ಯಾಬಿನ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಜೂನ್ ಮೊದಲ ವಾರ ಹಳಿ ನಿರ್ವಹಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಜೂ. 1ರಂದು ಕೊಚ್ಚುವೇಲಿಯಿಂದ ಹೊರಡುವ ನಂ. 16312 ಕೊಚ್ಚುವೇಲಿ -ಶ್ರೀ ಗಂಗಾನಗರ ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು 3 ಗಂಟೆ 50 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 1ರಂದು ಕೊಚ್ಚುವೇಲಿಯಿಂದ ಹೊರಡುವ ನಂ. 01464 ಕೊಚ್ಚುವೇಲಿ-ಲೋಕಮಾನ್ಯ ತಿಲಕ್(ಟಿ) ವೀಕ್ಲಿ ಎಕ್ಸ್‌ಪ್ರೆಸ್ಸನ್ನು 3 ಗಂ. 40 ನಿ. ತಡೆಹಿಡಿಯಲಾಗುತ್ತದೆ.
ಜೂ. 1ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ನಂ. 22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್‌ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ಸನ್ನು ಮಾರ್ಗಮಧ್ಯದಲ್ಲಿ 2 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 1ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡಲಿರುವ ನಂ. 12685 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ಸನ್ನು ಮಾರ್ಗಮಧ್ಯದಲ್ಲಿ 50 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ. ಜೂ. 1ರಂದು ತಿರುವನಂತಪುರ ಸೆಂಟ್ರಲ್‌ನಿಂದ ಹೊರಡುವ ನಂ. 16604 ತಿರುವನಂತಪುರ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 30 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.
ಜೂ. 4ರಂದು ನಾಗರಕೋವಿಲ್ ಜಂಕ್ಷನ್‌ನಿಂದ ಹೊರಡಲಿರುವ ನಂ. 16336 ನಾಗರಕೋವಿಲ್ ಜಂಕ್ಷನ್-ಗಾಂಧಿಧಾಮ ಬಿಜಿ ವೀಕ್ಲಿ ಎಕ್ಸ್‌ಪ್ರೆಸ್ಸನ್ನು 2 ಗಂಟೆ 20 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 4 ಮತ್ತು 7ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಹೊರಡಲಿರುವ ನಂ. 22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್‌ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ಸನ್ನು 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ.
ಜೂ. 4 ಮತ್ತು 7ರಂದು ತಿರುವನಂತಪುರ ಸೆಂಟ್ರಲ್‌ನಿಂದ ಹೊರಡಲಿರುವ ನಂ. 12431 ತಿರುವನಂತಪುರ ಸೆಂಟ್ರಲ್-ನಿಝಾಮುದ್ದೀನ್ ಜಂಕ್ಷನ್ ರಾಜಧಾನಿ ಎಕ್ಸ್‌ಪ್ರೆಸ್ಸನ್ನು 1 ಗಂಟೆ 10 ನಿಮಿಷ, ಜೂ. 4ರಂದು ಎರ್ನಾಕುಲಂ ಜಂಕ್ಷನ್‌ನಿಂದ ಹೊರಡುವ ನಂ. 12283 ಎರ್ನಾಕುಲಂ ಜಂಕ್ಷನ್- ಹಝರತ್ ನಿಝಾಮುದ್ದೀನ್ ಜಂಕ್ಷನ್ ದುರೊಂತೋ ಸೂಪರ್‌ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ.
ಜೂ. 6ರಂದು ಪೋರಬಂದರ್‌ನಿಂದ ಹೊರಡುವ ನಂ. 20910 ಪೋರಬಂದರ್-ಕೊಚ್ಚುವೇಲಿ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ಸನ್ನು ಮಾರ್ಗಮಧ್ಯೆ 2 ಗಂಟೆ 40 ನಿಮಿಷ ತಡೆಹಿಡಿಯಲಾಗುತ್ತದೆ. ಜೂ.7ರಂದು ಲೋಕಮಾನ್ಯ ತಿಲಕ್ (ಟಿ)ನಿಂದ ಹೊರಡಲಿರುವ ನಂ.16345 ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್ಸನ್ನು ಮಾರ್ಗಮಧ್ಯೆ 1 ಗಂಟೆ 30 ನಿಮಿಷ ತಡೆಹಿಡಿಯಲಾಗುತ್ತದೆ ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.